ಬೆಳಿಗ್ಗೆ ಎದ್ದ ತಕ್ಷಣ ಈ ಹತ್ತು ವಸ್ತುಗಳನ್ನು ನೋಡಬಾರದು
ದಿನದ ಉತ್ತಮ ಆರಂಭ ಇಡೀ ದಿನವನ್ನು ಸುಂದರವಾಗಿಸುತ್ತದೆ. ಇದರಿಂದ ಒಬ್ಬ ವ್ಯಕ್ತಿ ಪ್ರತಿದಿನ ಸಂತೋಷವಾಗಿರುತ್ತಾನೆ ಮತ್ತು ಅವನು ಎಲ್ಲದರಲ್ಲೂ ಯಶಸ್ವಿಯಾಗುತ್ತಾನೆ. ಆದರೆ ಬೆಳಿಗ್ಗೆ ಎದ್ದ ತಕ್ಷಣ ಈ 10 ವಸ್ತುಗಳನ್ನು ನೋಡಬೇಡಿ ದಿನ ಹಾಳಾಗುತ್ತೆ. ಹಗಲಿನಲ್ಲಿ ಏನಾದರೂ ಸಮಸ್ಯೆಯಾದರೆ ಅಪಘಾತವಾದರೆ ಬೆಳಿಗ್ಗೆ ಯಾರ ಮುಖ ನೋಡಿದೆ ಎಂದು ನಮ್ಮನ್ನು ಹಲವರು ಕೇಳುತ್ತಾರೆ. ಅನೇಕರು ಇದನ್ನು ಮೂಢನಂಬಿಕೆ ಎಂದು ಪರಿಗಣಿಸುತ್ತಾರೆ.
ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಧನಾತ್ಮಕ ಶಕ್ತಿಯ ಜೊತೆಗೆ ನಕಾರಾತ್ಮಕ ಶಕ್ತಿಯು ಇದೆ. ಅದಕ್ಕಾಗಿಯೇ ನಮ್ಮ ಮನೆಯ ಕೆಲ ವಸ್ತುಗಳು ನಮ್ಮ ಜೀವನದ ಮೇಲೆ ಪರಿಣಾಮ ಬೀರುತ್ತವೆ. ಶಾಸ್ತ್ರದ ಪ್ರಕಾರ ಬೆಳಿಗ್ಗೆ ಎದ್ದ ನಂತರ ಕೆಲವು ವಸ್ತುಗಳನ್ನು ನೋಡುವುದರಿಂದ ವ್ಯಕ್ತಿಯ ದೈನಂದಿನ ಜೀವನದಲ್ಲಿ ತೊಂದರೆಗಳು ಉಂಟಾಗುತ್ತವೆ. ಇದು ಆರ್ಥಿಕ ಮತ್ತು ಕೌಟುಂಬಿಕ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಹಾಗಾದರೆ, ಯಾವ ವಸ್ತುಗಳನ್ನು ನೋಡಲೇಬಾರದು ಎಂಬುದನ್ನು ನೋಡೋಣ ಬನ್ನಿ. ಬೆಳಗ್ಗೆ ಎದ್ದಾಗ ಒಡೆದ ವಸ್ತುಗಳನ್ನು ನೋಡಬೇಡಿ.
![](https://ondvishya.com/wp-content/uploads/2024/03/20240204_220759-scaled.jpg)
ಅದರಲ್ಲೂ ಒಡೆದ ಗಡಿಯಾರ ನೋಡಲೇಬಾರದು. ನಿಮ್ಮ ಮನೆಯಲ್ಲಿ ಇಂತಹ ಗಡಿಯಾರವಿದ್ದರೆ ತಕ್ಷಣ ತೆಗೆಯಿರಿ. ಇದರಿಂದ ವ್ಯಕ್ತಿಯ ಜೀವನದಲ್ಲಿ ನಕಾರಾತ್ಮಕತೆ ಪರಿಣಾಮ ಬೀರುವ ಸಾಧ್ಯತೆ ಇದೆ. ಬೆಳಗ್ಗೆ ಎದ್ದ ನಂತರ ಕನ್ನಡಿ ನೋಡುವುದನ್ನು ತಪ್ಪಿಸಿ ಅದರಲ್ಲೂ ಒಡೆದ ಕನ್ನಡಿಯಲ್ಲಿ ಮುಖ ನೋಡಿಕೊಂಡರೆ ಸಂಕಟವಾಗುತ್ತದೆ. ಬೆಳಿಗ್ಗೆ ಎದ್ದ ನಂತರ ಒಬ್ಬರ ನೆರಳನ್ನು ನೋಡಬೇಡಿ. ಇದು ನಿಮ್ಮ ಜೀವನದಲ್ಲಿ ಅಥವಾ ಸಂಬಂಧ ಪಟ್ಟ ವ್ಯಕ್ತಿಯ ಜೀವನದಲ್ಲಿ ನಕಾರಾತ್ಮಕತೆಯನ್ನು ತರಬಹುದು.
ಅದರ ನಂತರ ಕೌಟುಂಬಿಕ ಸಮಸ್ಯೆಗಳು ಹೆಚ್ಚಾಗುವ ಅಪಾಯವಿದೆ. ಮನೆಯಲ್ಲಿ ಮುರಿದ ಪಾತ್ರೆಗಳು ಮತ್ತು ಹಾನಿಗೊಳಗಾದ ಪೀಠೋಪಕರಣಗಳು ನಕಾರಾತ್ಮಕ ಶಕ್ತಿಯನ್ನು ತರುತ್ತದೆ. ಮುಂಜಾನೆ ಎದ್ದು ಈ ರೀತಿಯ ಪಾತ್ರಗಳನ್ನು ನೋಡಬೇಡಿ. ಇಂತಹ ವಸ್ತುಗಳನ್ನು ಮಲಗುವ ಕೋಣೆಯಲ್ಲಿ ಇಡಲೇಬಾರದು. ಬೆಳಿಗ್ಗೆ ಎದ್ದ ನಂತ್ರ ಹಾಸಿಗೆಯಿಂದ ನೇರವಾಗಿ ಅಡುಗೆ ಮನೆಗೆ ಹೋಗಬೇಡಿ. ಏಕೆಂದರೆ ಮುಂಜಾನೆ ಎದ್ದ ತಕ್ಷಣ ಒಲೆ ಹಚ್ಚುವುದು ಅಶುಭ. ಇದ್ದ 1015 ನಿಮಿಷಗಳ ನಂತರ ಅಡುಗೆ ಮನೆಗೆ ಹೋಗಿ ಮಲಗುವ ಕೋಣೆಯಲ್ಲಿ ಕಾನೂನು ಅಥವಾ ಹಿಂಸಾತ್ಮಕ ಪ್ರಾಣಿಗಳ ಚಿತ್ರಗಳನ್ನು ಹಾಕಬೇಡಿ. ಮುಂಜಾನೆ ಅವುಗಳನ್ನು ನೋಡಿದರೆ ಇಡೀ ದಿನ ಹಾಳಾಗುತ್ತೆ.
ಮಕ್ಕಳ ಕೋಣೆಯಲ್ಲೂ ಈ ಬಗ್ಗೆ ವಿಶೇಷ ಕಾಳಜಿ ವಹಿಸಿ. ಬೆಳಗ್ಗೆ ಎದ್ದಾಗ ಅಡುಗೆ ಮನೆಯಲ್ಲಿ ತೊಳೆಯದ ಪಾತ್ರೆಗಳು ಕಾಣಬಾರದು. ನಮ್ಮಲ್ಲಿ ಹೆಚ್ಚಿನವರು ಊಟದ ನಂತರ ಪ್ಲೇಟ್ ಗಳನ್ನು ಸಿಂಕ್ ನಲ್ಲಿ ಬಿಡುತ್ತಾರೆ. ಬೆಳಿಗ್ಗೆ ಎದ್ದ ತಕ್ಷಣ ನೋಡಿದರೆ ಅದು ಅಶುಭ. ಇದ್ದಾಗ ಚಾಕುಗಳು ಕತ್ತರಿ ಮತ್ತು ಕೋಲುಗಳನ್ನು ಸಹ ನೋಡಬಾರದು. ಇದು ನಕಾರಾತ್ಮಕ ಶಕ್ತಿಯನ್ನು ಹೊಂದಿರುತ್ತದೆ. ಇದು ದಿನದ ಕೆಟ್ಟ ಆರಂಭಕ್ಕೆ ಕಾರಣವಾಗುತ್ತದೆ. ಹಾಗಾದರೆ ಎದ್ದ ತಕ್ಷಣ ಏನು ಮಾಡಬೇಕು? ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.