ಮೇಷ ರಾಶಿ:- ಮಾನಸಿಕವಾಗಿ ಇಂದು ನೀವು ತುಂಬಾ ಬಲಶಾಲಿಯಾಗಿ ಇರುತ್ತೀರಿ ಮತ್ತು ಪ್ರತಿ ಸವಾಲನ್ನು ಸುಲಭವಾಗಿ ಎದುರಿಸುತ್ತೀರಿ. ಕೆಲಸದಲ್ಲಿ ನಿಮಗೆ ಎಲ್ಲಾ ಅನುಕೂಲಕರವಾಗಿರುತ್ತದೆ ನಿಮ್ಮ ನಿರ್ಲಕ್ಷತನದಿಂದ ಕೆಲವೊಂದು ಸಮಸ್ಯೆಗಳು ಬರಬಹುದು ಅದೃಷ್ಟ ಸಂಖ್ಯೆ – 1 ಅದೃಷ್ಟ ಬಣ್ಣ – ಕೆಂಪು ಬಣ್ಣ ಸಮಯ – ಬೆಳಗ್ಗೆ 7:30 ರಿಂದ 10:45 ರವರೆಗೆ

WhatsApp Group Join Now
Telegram Group Join Now

ವೃಷಭ ರಾಶಿ:- ಉದ್ಯೋಗಿಗಳಿಗೆ ಈ ದಿನ ಬಹಳ ಉತ್ತಮ ದಿನವಾಗಿರಲಿದೆ. ಈ ದಿನ ಹಣದ ಪರಿಸ್ಥಿತಿ ಉತ್ತಮವಾಗಿರಲಿದೆ ಮನೆಯಲ್ಲಿರುವ ಸದಸ್ಯರೊಂದಿಗೆ ಸಂಬಂಧ ಉತ್ತಮವಾಗಿರುತ್ತದೆ. ಕಣ್ಣಿಗೆ ಸಂಬಂಧಿಸಿದ ಕೆಲವು ಸಮಸ್ಯೆಗಳು ಕೆಲವರಿಗೆ ಕಾಣಿಸಬಹುದು ಅದೃಷ್ಟ ಸಂಖ್ಯೆ – 1 ಅದೃಷ್ಟ ಬಣ್ಣ – ಬಿಳಿ ಬಣ್ಣ ಸಮಯ – ಸಂಜೆ 5:30 ರಿಂದ ರಾತ್ರಿ 8:45 ರವರೆಗೆ

ಮಿಥುನ ರಾಶಿ:- ಮನೆಯ ವಾತಾವರಣ ಹರ್ಷ ಚಿತ್ತದಿಂದ ಹೊಳೆಯುತ್ತದೆ ದಾಂಪತ್ಯ ಜೀವನದಲ್ಲಿ ಸಂತೋಷ ಹೆಚ್ಚಾಗುತ್ತದೆ ನಿಮ್ಮ ಖರ್ಚನ್ನು ಕಡಿಮೆ ಮಾಡಿಕೊಂಡರೆ ಮುಂದಿನ ದಿನಗಳಲ್ಲಿ ಹೆಚ್ಚಿನ ಅಭಿವೃದ್ಧಿಯನ್ನು ಹೊಂದುತ್ತೀರಿ ಅದೃಷ್ಟ ಸಂಖ್ಯೆ – 8 ಅದೃಷ್ಟ ಬಣ್ಣ – ನೇರಳೆ ಬಣ್ಣ ಸಮಯ – ಮಧ್ಯಾಹ್ನ 12:30 ರಿಂದ 3:45 ರವರೆಗೆ


ಕಟಕ ರಾಶಿ:- ಮಾನಸಿಕವಾಗಿ ನೀವು ಕೋಲಾಹಲವನ್ನು ಅನುಭವಿಸುತ್ತಿದ್ದರೆ ನಿಮ್ಮ ಮನಸ್ಸಿನಲ್ಲಿರುವ ನೋವನ್ನು ಬೇರೊಬ್ಬರಲ್ಲಿ ಹಂಚಿಕೊಳ್ಳುವುದು ಉತ್ತಮ. ವ್ಯಾಪಾರಸ್ಥರು ಆರ್ಥಿಕ ಪರಿಸ್ಥಿತಿಯನ್ನು ಸರಿಪಡಿಸಿಕೊಳ್ಳಬಹುದು. ಅದೃಷ್ಟ ಸಂಖ್ಯೆ – 2 ಅದೃಷ್ಟ ಬಣ್ಣ – ಕೆಂಪು ಬಣ್ಣ ಸಮಯ – ಬೆಳಗ್ಗೆ 8:45 ರಿಂದ ಮಧ್ಯಾಹ್ನ 12 ಗಂಟೆಯವರೆಗೆ

ಸಿಂಹ ರಾಶಿ:- ಈ ದಿನ ನಿಮ್ಮ ಆರೋಗ್ಯ ಹಾಗೂ ಹಣಕಾಸಿನ ಬಗ್ಗೆ ಹೆಚ್ಚು ಜಾಗರೂಕತೆಯನ್ನು ವಹಿಸುವಂತೆ ಸೂಚಿಸಲಾಗಿದೆ ಕೆಲಸದ ಜೊತೆ ನೀವು ಸಾಕಷ್ಟು ವಿಶ್ರಾಂತಿಯನ್ನು ಪಡೆಯುತ್ತೀರಿ. ನಿಮ್ಮ ಖರ್ಚುಗಳನ್ನು ಕಡಿಮೆ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ ಅದೃಷ್ಟ ಸಂಖ್ಯೆ – 1 ಅದೃಷ್ಟ ಬಣ್ಣ – ಹಸಿರು ಬಣ್ಣ ಸಮಯ – ಸಂಜೆ 4:15 ರಿಂದ ರಾತ್ರಿ 7.30 ರವರೆಗೆ

ಕನ್ಯಾ ರಾಶಿ:- ಇಂದು ವಿದ್ಯಾರ್ಥಿಗಳಿಗೆ ಶುಭದಿನ ವಾಗಿರಲಿದೆ ಹಣದ ಪರಿಸ್ಥಿತಿ ಅಂದರೆ ನಿಮ್ಮ ಆದಾಯ ಈ ದಿನ ಹೆಚ್ಚಾಗಬಹುದು ನಿಮ್ಮ ವ್ಯಾಪಾರ ವ್ಯವಹಾರಗಳಲ್ಲಿ ನೀವು ನಿರೀಕ್ಷಿಸಿದಂತೆ ಅಭಿವೃದ್ಧಿಯನ್ನು ಪಡೆಯುತ್ತೀರಿ. ನಿಮ್ಮ ಮಕ್ಕಳ ಬಗ್ಗೆ ಹೆಚ್ಚು ಗಮನ ವಹಿಸಬೇಕು ಅದೃಷ್ಟ ಸಂಖ್ಯೆ – 8 ಅದೃಷ್ಟ ಬಣ್ಣ – ಗುಲಾಬಿ ಬಣ್ಣ ಸಮಯ – ಬೆಳಗ್ಗೆ 11:15 ರಿಂದ ಮಧ್ಯಾಹ್ನ 2:30 ರವರೆಗೆ

ತುಲಾ ರಾಶಿ:- ಇಂದು ನಿಮಗೆ ತುಂಬಾ ಕಾರ್ಯನಿರತ ದಿನವಾಗಿರಲಿದೆ ಈ ದಿನ ನಿಮ್ಮ ಎಲ್ಲಾ ಕೆಲಸವನ್ನು ಯೋಜನೆಯ ಪ್ರಕಾರ ಪೂರ್ಣಗೊಳಿಸಲು ಪ್ರಯತ್ನಿಸುತ್ತೀರಿ. ವ್ಯಾಪಾರಸ್ಥರು ಹಣಕಾಸಿನ ವಿಷಯವಾಗಿ ಸ್ವಲ್ಪ ತೊಂದರೆಯನ್ನು ಅನುಭವಿಸಬಹುದು ಒಡಹುಟ್ಟಿದವರೊoದಿಗಿನ ಸಂಬಂಧ ಬಲವಾಗಿರುತ್ತದೆ ಅದೃಷ್ಟ ಸಂಖ್ಯೆ – 1 ಅದೃಷ್ಟ ಬಣ್ಣ – ಕಂದು ಬಣ್ಣ ಸಮಯ – ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1:15 ರವರೆಗೆ

ವೃಶ್ಚಿಕ ರಾಶಿ:- ನಿರುದ್ಯೋಗಿಗಳಾಗಿದ್ದರೆ ನಿಮಗೆ ಈ ದಿನ ಒಳ್ಳೆಯ ಸುದ್ದಿ ಬರಬಹುದು ನಿಮ್ಮ ಸಂಗಾತಿಯ ಆರೋಗ್ಯದಲ್ಲಿ ಏನಾದರೂ ತೊಂದರೆ ಉಂಟಾಗಿದ್ದರೆ ಅದನ್ನು ಸರಿಪಡಿಸಿಕೊಳ್ಳುವಂತೆ ಉತ್ತಮ ವೈದ್ಯರ ಬಳಿ ಕರೆದುಕೊಂಡು ಹೋಗುವುದು ಉತ್ತಮ. ವ್ಯಾಪಾರಸ್ಥರು ತಮ್ಮ ವಿರೋಧಿಗಳೊಂದಿಗೆ ಜಾಗರೂಕರಾಗಿ ಇರುವಂತೆ ಸೂಚಿಸಲಾಗಿದೆ ಅದೃಷ್ಟ ಸಂಖ್ಯೆ – 3 ಅದೃಷ್ಟ ಬಣ್ಣ – ಬಿಳಿ ಬಣ್ಣ ಸಮಯ – ಮಧ್ಯಾಹ್ನ 3 ರಿಂದ ಸಂಜೆ 6:15 ರವರೆಗೆ

ಧನಸ್ಸು ರಾಶಿ:- ಬಡವರಿಗೆ ನಿಮ್ಮ ಕೈಲಾದಷ್ಟು ದಾನವನ್ನು ಮಾಡುವುದರ ಮೂಲಕ ಈ ದಿನ ಪ್ರಾರಂಭಿಸಿ ಇದರಿಂದ ಉತ್ತಮ ಪ್ರಯೋಜನವನ್ನು ಪಡೆದುಕೊಳ್ಳುತ್ತೀರಿ ಹಣದ ಪರಿಸ್ಥಿತಿ ಈ ದಿನ ಸುಧಾರಿಸಬಹುದು ಈ ದಿನ ಹೊಸ ಆದಾಯದ ಮೂಲವನ್ನು ಪಡೆಯಬಹುದು ಅದೃಷ್ಟ ಸಂಖ್ಯೆ – 9 ಅದೃಷ್ಟ ಬಣ್ಣ – ನೇರಳೆ ಬಣ್ಣ ಸಮಯ – ಬೆಳಿಗ್ಗೆ 6:15 ರಿಂದ 9:30ವರೆಗೆ

ಮಕರ ರಾಶಿ:- ವಿದ್ಯಾರ್ಥಿಗಳಿಗೆ ಈ ದಿನ ದೊಡ್ಡ ಅಡಚಣೆ ಉಂಟಾಗಬಹುದು ಇದರಿಂದ ಸಾಕಷ್ಟು ಒತ್ತಡಕ್ಕೆ ಒಳಗಾಗುತ್ತೀರಿ ಸ್ವಲ್ಪ ಮಟ್ಟಿಗೆ ಆರೋಗ್ಯದಲ್ಲಿ ತೊಂದರೆ ಉಂಟಾಗಬಹುದು ವ್ಯಾಪಾರಸ್ಥರಿಗೆ ಈ ದಿನ ತುಂಬಾ ಕಾರ್ಯನಿರತ ದಿನವಾಗಿರಲಿದೆ. ಸಂಜೆ ಸಮಯ ಯಾವುದಾದರು ಶುಭ ಸುದ್ದಿ ಕೇಳುತ್ತೀರಿ ಅದೃಷ್ಟ ಸಂಖ್ಯೆ – 9 ಅದೃಷ್ಟ ಬಣ್ಣ – ಹಳದಿ ಬಣ್ಣ ಸಮಯ – ಸಂಜೆ 6:45 ರಿಂದ ರಾತ್ರಿ 10 ಗಂಟೆಯವರೆಗೆ

ಕುಂಭ ರಾಶಿ:- ಉದ್ಯೋಗಿಗಳು ಬಹಳ ಕಷ್ಟಪಟ್ಟು ಕೆಲಸ ಮಾಡುವಂತೆ ಸೂಚಿಸಲಾಗಿದೆ. ಕುಟುಂಬ ಜೀವನವು ಸಂತೋಷವಾಗಿ ಇರುತ್ತದೆ ನಿಮ್ಮ ತಾಯಿಯಿಂದ ಏನಾದರೂ ಪ್ರಯೋಜನ ಪಡೆಯುವ ಸಾಧ್ಯತೆ ಇದೆ. ಸಂಗಾತಿಯ ನಡವಳಿಕೆ ನಿಮಗೆ ಸಂತೋಷವನ್ನು ಹೆಚ್ಚಿಸುತ್ತದೆ ಅದೃಷ್ಟ ಸಂಖ್ಯೆ – 7 ಅದೃಷ್ಟ ಬಣ್ಣ – ನೀಲಿ ಬಣ್ಣ ಸಮಯ – ಮಧ್ಯಾಹ್ನ 1:45 ರಿಂದ ಸಂಜೆ 5 ರವರೆಗೆ

ಮೀನ ರಾಶಿ:- ಹಣಕಾಸಿನ ವಿಷಯದಲ್ಲಿ ಇಂದು ಮಿಶ್ರ ದಿನವಾಗಿರಲಿದೆ ನಿಮ್ಮ ಆದಾಯ ಉತ್ತಮವಾಗಿಲ್ಲ ಆದರೆ ವೆಚ್ಚವನ್ನು ಹೆಚ್ಚಿಸಲು ಸಾಧ್ಯವಿದೆ ಈ ದಿನ ನಿಮ್ಮ ಕೆಲಸದಲ್ಲಿ ಸಾಮಾನ್ಯ ದಿನವಾಗಿರುತ್ತದೆ. ಕಚೇರಿಯಲ್ಲಿ ಕೆಲಸದ ಹೊರೆ ಕಡಿಮೆ ಇರುತ್ತದೆ ಅದೃಷ್ಟ ಸಂಖ್ಯೆ – 5 ಅದೃಷ್ಟ ಬಣ್ಣ – ಕಿತ್ತಳೆ ಬಣ್ಣ ಸಮಯ – ಮಧ್ಯಾಹ್ನ 12:45 ರಿಂದ ಸಂಜೆ 5:00 ವರೆಗೆ.