ಯಾರಿಗೂ ತಿಳಿಯದ ಸುಧಾ ಮೂರ್ತಿ ಅವರ ಕಣ್ಣೀರಿನ ಕಥೆ.
ನೋಡಲು ಸಾಧಾರಣವಾಗಿ ಕಾಣುವ ಸುಧಾ ಮೂರ್ತಿಯವರು ನಿಜಕ್ಕೂ 17000 ಕೋಟಿಯ ಒಡತಿ, ಇವರು ಸಾಮಾನ್ಯವಾಗಿ ಬರುವ ಎಲ್ಲಾ ಸಮಾರಂಭಗಳಿಗೂ ಹಾಗೂ ಇತರ ಅವರ ಮನೆಯ ಶುಭ ಸಮಾರಂಭಗಳಲ್ಲಿ ನೀವು ಒಂದೇ ಒಂದು ಬಂಗಾರದ ಒಡವೆಯನ್ನು ಕೂಡ ನೋಡಲು ಸಾಧ್ಯವಾಗುವುದಿಲ್ಲ ಏಕೆಂದರೆ ಅಷ್ಟು ಸರಳವಾದ ವ್ಯಕ್ತಿ .ಇವರು ಇಂದಿನ ಕಾಲದ ಅನೇಕರಿಗೆ ಉದಾಹರಣೆಯಾಗಿರುವಂತಹ ಒಬ್ಬ ಮಹಿಳೆ ಯಾವುದೇ ಒಂದು ಬೆಲೆಬಾಳುವ ಬಟ್ಟೆ ಹಾಗೂ ಯಾವುದೇ ಒಂದು ಬೆಲೆ ಬಳುವ ವಸ್ತುಗಳು ಇವರ ಹತ್ತಿರ ಇರುವುದಿಲ್ಲ ಇವರು ಐಟಿ ಕಂಪನಿಗಳಲ್ಲೇ ದೊಡ್ಡದಾದ ಇನ್ಫೋಸಿಸ್ ಕಂಪನಿಯ ಸ್ಥಾಪಕರು, ಇವರು ನಿಮ್ಮ ಎಲ್ಲರಿಗೂ ಇಷ್ಟು ಜನಪ್ರಸಿದ್ದಿ ಆಗಲು ಕಾರಣ ಇವರ ಶ್ರೀಮಂತಿಕೆಯಲ್ಲ ಅವರ ಆ ಸರಳತೆ ಮತ್ತು ಸಾಮಾಜಿಕ ಕಾರ್ಯಗಳಿಂದ ವಿಶ್ವದಾದ್ಯಂತ ಪ್ರಖ್ಯಾತಿ ಹೊಂದಿದ್ದಾರೆ ಒಂದು ಚಿಕ್ಕ ಮನೆಯಲ್ಲಿ ಶುರುವಾದ ಇನ್ಫೋಸಿಸ್ ಕಂಪನಿಯು ಇದೀಗ ಜಗತ್ ಖ್ಯಾತಿಯಾಗಿ ಹೊರಹೊಮ್ಮಿ ಇರುವುದು ಹೇಗೆ ಮತ್ತು ಅದನ್ನು ನಿರ್ಮಿಸಲು ಈ ದಂಪತಿಗಳು ಪಟ್ಟ ಕಷ್ಟ ಸಾಲು ಸಾಲು.ಅವರ ಪತಿಯಾದ ನಾರಾಯಣ ಮೂರ್ತಿಯವರು 20 6 1946 ರಂದು ಚಿಕ್ಕಬಳ್ಳಾಪುರದ ಶಿಡ್ಲಘಟ್ಟ ಎಂಬ ಗ್ರಾಮದಲ್ಲಿ ಜನಿಸುತ್ತಾರೆ.
ಐ ಐ ಟಿ ಕಾನ್ಪುರ್ ನಲ್ಲಿ ಇವರು ಮಾಸ್ಟರ್ ಡಿಗ್ರಿ ಯನ್ನು ಪಡೆಯುತ್ತಾರೆ ನಂತರ ಇವರಿಗೆ ಐ ಐ ಎಫ್ ಅಹಮದ್ ನಲ್ಲಿ ರಿಸರ್ಚ್ ಅಸೋಸಿಯೇಟ್ ಆಗಿ ಕೆಲಸ ಸಿಗುತ್ತದೆ ಅದಾದ ನಂತರ ಇವರು ಸ್ವತಹ ಒಂದು ಕಂಪನಿಯನ್ನು ಶುರು ಮಾಡಬೇಕು ಎಂದು ಆಶಿಸುತ್ತಾರೆ ಸಾಫ್ಟ್ರೋನಿಕ್ಸ್ ಎಂಬ ಕಂಪನಿಯನ್ನು ಶುರು ಮಾಡುತ್ತಾರೆ ಆದರೆ ಅದು ಅರ್ಧಕ್ಕೆ ನಿಂತು ಹೋಗುತ್ತದೆ ಅದರಿಂದ ದೂರ ಹೋಗಿ ಪುಣೆಯಲ್ಲಿರುವ ಪಾರ್ಟಿ ಕಂಪ್ಯೂಟರ್ ಸಿಸ್ಟಮ್ ಎಂಬ ಕಂಪನಿಗೆ ಸೇರಿಕೊಳ್ಳುತ್ತಾರೆ, ಅವರ ಪತ್ನಿಯದ ಸುಧಾ ಮೂರ್ತಿಯವರು ಡಾಕ್ಟರ್ ಕುಟುಂಬ ಒಂದರಲ್ಲಿ ಜನಿಸುತ್ತಾರೆ ಇವರು ಚಿಕ್ಕವಯಸ್ಸಿನಿಂದ ತುಂಬಾ ಧೈರ್ಯಶಾಲಿಯಾಗಿ ಇರುತ್ತಾರೆ ಹಾಗೂ ನೇರ ನುಡಿ ಮತ್ತು ತುಂಬಾ ಓದಿನಲ್ಲಿ ಇರುತ್ತಾರೆ ಹಾಗಾಗಿ ಇವರ ಸಹೋದರಿಯರು ವೈದ್ಯಕೀಯವನ್ನು ಆಯ್ಕೆ ಮಾಡಿದಾಗ ಇವರು ಇಂಜಿನಿಯರಿಂಗ್ ಮಾಡುತ್ತೇನೆ ಎಂದು ಹೇಳುತ್ತಾರೆ ಅಂದಿನ ಕಾಲದಲ್ಲಿ ಇಂಜಿನಿಯರಿಂಗ್ ಮಾಡುವುದು ಎಂದರೆ ತುಂಬಾ ಕಷ್ಟ ಹಾಗೂ ಅವರು ಸೇರಿಕೊಂಡಿದ್ದ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕೇವಲ ಅವರೊಬ್ಬರು ಮಾತ್ರ ಮಹಿಳೆ ಹಾಗಾಗಿ ಅಲ್ಲಿ ಅವರು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗಿತ್ತು.
ಅದೇ ಇಂಜಿನಿಯರಿಂಗ್ ಅಲ್ಲಿ ಅವರಿಗೆ ಗೋಲ್ಡ್ ಮೆಡಲ್ ಸಿಗುವುದು ಅದಾದ ನಂತರ ಅಲ್ಲಿ ಅವರನ್ನು ಎಲ್ಲರೂ ತುಂಬಾ ಗೌರವದಿಂದ ನೋಡುತ್ತಾರೆ.ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಟಾಟಾ ಕಂಪನಿಯಲ್ಲಿ ಮಹಿಳೆಯರಿಗೆ ಕೆಲಸ ಇಲ್ಲ ಎಂದು ಆ ಕಂಪನಿಯ ಸಿಇಒ ಪ್ರಕಟಿಸುತ್ತಾರೆ ಇದನ್ನು ನೋಡಿದ ಸುಧಾ ಮೂರ್ತಿಯವರು ತುಂಬಾ ಕೋಪಗೊಂಡು ಆ ವ್ಯಕ್ತಿಗೆ ಪತ್ರ ಬರೆಯುತ್ತಾರೆ ಕೆಲಸದಲ್ಲಿ ಹೆಣ್ಣು ಮತ್ತು ಗಂಡಿಗೆ ಏಕೆ ಸಮಾನತೆ ಇರುವುದಿಲ್ಲ ಏಕೆ ನಿಮಗೆ ಹೆಣ್ಣು ಮಕ್ಕಳಿಗೆ ಕೆಲಸ ಕೊಡಲು ಸಾಧ್ಯವಾಗುವುದಿಲ್ಲ ಎಂದು ಪ್ರಶ್ನಿಸುತ್ತಾರೆ ಆಗ ಆ ವ್ಯಕ್ತಿ ನಮ್ಮ ಈ ಫ್ಯಾಕ್ಟರಿಯಲ್ಲಿ ತುಂಬಾ ಕಷ್ಟಪಟ್ಟು ಕೆಲಸ ಮಾಡಬೇಕು ಹಾಗೂ ಅದು ಹೆಣ್ಣು ಮಕ್ಕಳಿಂದ ಸಾಧ್ಯವಾಗುವುದಿಲ್ಲ ಹಾಗಾಗಿ ಈ ರೀತಿ ಪ್ರಕಟಿಸಿದ್ದು ಎಂದು ಹೇಳುತ್ತಾರೆ, ಆದರೆ ಸುಧಾ ಮೂರ್ತಿಯವರು ಮೊದಲು ಯಾರಿಗೆ ಅವಕಾಶ ನೀಡದೆ ಈ ರೀತಿ ಹೇಳುವುದು ಸರಿಯಲ್ಲ ಸರ್ ಎಂದು ಹೇಳುತ್ತಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ