ಯಾರು ಈ ಬಿಗ್ ಬಾಸ್ ಉಗ್ರಂ ಮಂಜು ಈತನ ಹಿನ್ನಲೆ ನಿಮಗೆ ಗೊತ್ತಾ ? ನಟನೆ ಜೊತೆಗೆ ಯಾವ ಕೆಲಸ ಮಾಡ್ತಿದ್ರು ಗೊತ್ತಾ ?
ಬಿಗ್ ಬಾಸ್ 11ಸೀಸನ್ ನಲ್ಲಿ ಪರ್ದಿಯಾಗಿರುವಂತಹ ಉಗ್ರಂ ಮಂಜು ಇವರು ತನ್ನ ಕುಟುಂಬವನ್ನ ಬಹಳ ಪ್ರೀತಿಸುತ್ತಾರೆ. ತಮ್ಮ ಮನಸ್ಸಿಗೆ ನೋವಾದಾಗ ತನ್ನ ತಂದೆಯ ಬಳಿ ಕುಳಿತು ಕಾಫಿ ಕುಡಿಯುತ್ತಾ ಮಾತನಾಡಿದರೆ ತನ್ನ ಮನಸ್ಸಿನಲ್ಲಿರುವ ಎಲ್ಲಾ ನೋವು ಕಳೆದು ಹೋಗುತ್ತದೆ ಎಂದು ಹೇಳಿಕೊಂಡಿದ್ದಾರೆ ಹಾಗೂ ತನ್ನ ಮೂರು ಜನ ತಂಗಿಯರಿಗೆ ಮದುವೆ ಮಾಡಿದ ನಂತರವೇ ನಾನು ಮದುವೆಯಾಗುವುದು ಎಂದು ಹಾಗೂ ಕಲಾ ಸೇವೆಯಲ್ಲಿ ತೊಡಗಿಕೊಂಡಿದ್ದಾರೆ ಎಂದು ಹೇಳಲಾಗುತ್ತದೆ ಇವರ ಬಗ್ಗೆ ಬಿಗ್ ಬಾಸ್ ನಲ್ಲಿ ಕಿಚ್ಚ ಸುದೀಪ್ ಅವರು ಇವರ ಬಗ್ಗೆ ಪರಿಚಯಿಸುತ್ತಾರೆ.
ಉಗ್ರಂ ಮಂಜು ಎಂದ ಕೂಡಲೇ ಅವರ ನಟನೆಯ ಹಲವು ಸಿನಿಮಾಗಳು ನೆನಪಾಗಬಹುದು 2014ರಲ್ಲಿ ಬಂದಂತಹ ಉಗ್ರಂ ಚಿತ್ರದ ಶಾಜಿ ಪಾತ್ರದ ಇವರ ನಟನೆ ಜನರ ಗಮನವನ್ನು ಸೆಳೆದಂತಹ ಮೊದಲ ಚಿತ್ರ ಆ ಚಿತ್ರದ ಮೂಲಕ ದಿಂದಲೇ ಉಗ್ರಂ ಮಂಜು ಎಂದು ಇವರನ್ನು ರೂಪಿಸಿಕೊಳ್ಳಲಾಗಿತ್ತು ಈ ಹತ್ತು ವರ್ಷಗಳಲ್ಲಿ ಅವರು ಅನೇಕ ಚಿತ್ರಗಳಲ್ಲಿ ಪಾತ್ರ ವಹಿಸಿದ್ದರು ಸಹ ಜನ ಮಾತ್ರ ಇವರನ್ನು ಉಗ್ರ ಮಂಜು ಎಂದು ಕರಿಯುತ್ತಾರೆ ವಿಲನ್ ಪಾತ್ರಗಳಿಗೆ ಹೊಸ ತಿರುವನು ಕೊಟ್ಟಿರುವಂತಹ ಇವರ ಅಭಿನಯಕ್ಕೆ ಜನರು ಮಾರುಹೋಗಿದ್ದಾರೆ.
ಖಳನಾಯಕನಾಗಿಯೇ ಹೆಚ್ಚು ಗುರುತಿಸಿಕೊಂಡಿರುವಂತಹ ಉಗ್ರಂ ಮಂಜು ನಿಜ ಜೀವನದಲ್ಲಿ ಹೇಗೆ ಇವರ ಹಿಮಾಲಯ ಏನು? ಚಿತ್ರರಂಗದಲ್ಲಿ ಇವರ ನಂಟು ಹೇಗೆ ಸಾಧ್ಯವಾಯಿತು? ಅಭಿನಯ ಇವರಲ್ಲಿ ಕರಗತವಾಗಿದ್ದು ಹೇಗೆ ಎಂಬ ಮುಂತಾದ ಸಂಗತಿಗಳ ಬಗ್ಗೆ ತಿಳಿಯೋಣ ಬಿಗ್ ಬಾಸ್ ಶುರುವಾಗಿ ಈಗಾಗಲೇ ಒಂದು ವಾರವೇ ಕಳೆದುಹೋಯಿತು ಬಿಗ್ ಬಾಸ್ ಶುರುವಾದ ಮೊದಲ ದಿನದಿಂದಲೇ ಅನೇಕ ರೀತಿಯ ಕೋಲಾಹಲ ಗಳು ಏರ್ಪಟ್ಟಿವೆ ಬಿಗ್ ಬಾಸ್ ನೋಡುವಂತಹ ವೀಕ್ಷಕರಿಗೆ ಉಗ್ರ ಮಂಜು ಅವರ ಹಾಸ್ಯ ಪ್ರಜ್ಞೆ ಹಾಗೂ ಸಕ್ರಿಯಗಳ ಬಗ್ಗೆ ಪರಿಚಯವಾಗಿರುತ್ತದೆ ಸಿನಿಮಾದಲ್ಲಿ ಕಾಣಿಸುವಂತಹ ಉಗ್ರಂ ಮಂಜು ಜೀವನವೇ ಬೇರೆ ಹಾಗೂ ಇದೀಗ ಬಿಗ್ ಬಾಸ್ 11 ರ ಸೀಸನ್ ನಲ್ಲಿ ಸ್ಪರ್ಧಿಯಾಗಿರುವಂಥ ಉಗ್ರಂ ನಿಜವಾದ ಜೀವನವೇ ಬೇರೆ
ಉಗ್ರಂ ಮಂಜು ಅವರ ಮೂಲ ಹೆಸರು ಮಂಜುನಾಥ್ ಗೌಡ ಇವರು ಮೂಲತಃ ಕೋಲಾರದ ಮಾಲೂರಿನವರು ಇಲ್ಲಿಯ ಚಲಗನಹಳ್ಳಿ ಅವರಾಗಿರುವಂತಹ ಮಂಜು ರವರು ಒಂದು ರಂಗಭೂಮಿಯ ಕಲಾವಿದರು ಇವರ ತಂದೆ ರಾಮೇಗೌಡರು ಮಾಲೂರಿನಲ್ಲಿ ಹಾಗೂ ಅಲ್ಲಿನ ಸುತ್ತಮುತ್ತ ಪೌರಾಣಿಕ ನಾಟಕಗಳಿಗೆ ಹೆಚ್ಚು ಪ್ರಸಿದ್ಧಿ ಯಾಗಿದ್ದರು ಇವರದ್ದು ಕೂಡ ಕಲಾವಿದರ ಪರಿಹಾರ ಇವರ ತಂದೆ ಹಾಗೂ ದೊಡ್ಡಪ್ಪ ಅನೇಕ ನಾಟಕಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದರು ಯಾವುದೋ ಒಂದು ಜಾತ್ರೆ ಅಥವಾ ಊರಿನ ಹಬ್ಬಕ್ಕೆ ಮಾಡುವ ನಾಟಕವನ್ನು ವರ್ಷ ಪೂರ್ತಿ ಅಭ್ಯಾಸ ಮಾಡುತ್ತಿದ್ದರು.
ಒಂದು ಪರಂಪರೆ ಇನ್ನೂ ಗ್ರಾಮೀಣ ಭಾಗದಲ್ಲಿ ಹಾಗೆಯೇ ಇದೆ ಆವಾಗ ಪೌರಾಣಿಕ ನಾಟಕಗಳದ್ದೇ ಸುದ್ದಿ ಪ್ರಸಂಗದ ಕಥೆಗಳನ್ನು ರಚಿಸಿ ಅದಕ್ಕೆ ಸೂಕ್ತವಾದ ವ್ಯಕ್ತಿಯನ್ನು ಆರಿಸಿ ನಾಟಕ ಅಭ್ಯಾಸವನ್ನು ಮಾಡಿಸುತ್ತಿದ್ದರು ಉಗ್ರಂ ಮಂಜು ಅವರ ತಂದೆ ಹೆಚ್ಚಾಗಿ ಭೀಮನ ಪಾತ್ರವನ್ನು ನಿರ್ವಹಿಸುತ್ತಿದ್ದರು ಇದು ಆಂಧ್ರದ ಗಡಿಭಾಗ ವಾಗಿರುವುದರಿಂದ ಕನ್ನಡದಷ್ಟೆ ತೆಲುಗು ನಾಟಕಗಳು ಸಹ ಜನಪ್ರಿಯವಾಗಿದ್ದವು ಚಿಕ್ಕ ದಿನದಲ್ಲೂ ಆ ನಾಟಕಗಳನ್ನು ನೋಡಿಕೊಂಡು ಬೆಳೆದು ಬಂದಂತಹ ಮಂಜು ಅವರಿಗೆ ಅಭಿನಯದ ಕಡೆ ಆಸಕ್ತಿ ಮೂಡಿತ್ತು ಕಲೆ ಎಂಬುದು ಅವರ ತಂದೆಯಿಂದಲೇ ರಕ್ತಗತವಾಗಿದೆ ಉಗ್ರಂ ಮಂಜು ಅವರಿಗೆ.
ಮಾಲೂರ್ನಲ್ಲಿ ಇವರ ಹೈ ಸ್ಕೂಲ್ ಶಿಕ್ಷಣ ನೆರೆವೇರುತ್ತೆ ಮಂಜು ಅವರಿಗೆ ಸಣ್ಣ ವಯಸ್ಸಿನಿಂದಲೇ ಅಭಿನಯದ ಕಡೆಗೆ ಹೆಚ್ಚು ಒಲವು ಮಾಲೂರಿನಲ್ಲಿ ಇರುವಂತಹ ಟೆಂಟ್ ಗಳಲ್ಲಿ ಸಿನಿಮಾ ನೋಡುವ ಹುಚ್ಚು ಅವರಿಗೆ ತುಸು ಹೆಚ್ಚಾಗಿ ಇತ್ತು ಆದರೆ ಇಷ್ಟ ಬಂದಂತೆ ಅವರಿಗೆ ಸಿನಿಮಾ ನೋಡಲು ಅವಕಾಶವಿರಲಿಲ್ಲ ಅದಕ್ಕೆ ಕಾರಣ ಅವರ ತಂದೆ ರಾಮೇಗೌಡರು ಶಿಸ್ತಿನ ವ್ಯಕ್ತಿ ಮಂಜುಗೆ ಅವರ ತಂದೆಯ ಭಯ ಬಿಪರಹಿತವಾಗಿತ್ತು ಮಂಜು ಅವರ ತಂದೆಯ ಇಷ್ಟಕ್ಕೆ ವಿರುದ್ಧವಾಗಿ ಯಾವುದಾದರೂ ಕೆಲಸವನ್ನು ಮಾಡಿದ್ದೆ ಆಗಿದ್ದಲ್ಲಿ ಶಿಕ್ಷೆ ಕಟ್ಟಿಟ್ಟ ಬುತ್ತಿಯಾಗಿತ್ತು ಸಿನಿಮಾ ನೋಡಬೇಕೆಂದರೆ ಹೊಲದಲ್ಲಿ ಕೆಲಸವನ್ನು ಮುಗಿಸಿಯೇ ಹೋಗಬೇಕಿತ್ತು.
ಚಲಗಾನ ಹಳ್ಳಿಯಲ್ಲಿ ಇವರದೇ ಆದಂತಹ ಒಂದಷ್ಟು ಕೃಷಿ ಭೂಮಿಯು ಸಹ ಹೊಂದಿದ್ದರು ಇಲ್ಲಿ ದಿನ ಬೆಳಗಾದರೆ ಗದ್ದೆಗೆ ನೀರನ್ನು ಕಟ್ಟುವ ಕೆಲಸ ಇದ್ದೇ ಇರುತ್ತದೆ ಸಿನಿಮಾ ನೋಡಬೇಕೆಂದರೆ ಮೊದಲು ಈ ಕೆಲಸವನ್ನು ಮುಗಿಸಯ್ ಹೊರಡಬೇಕೆಂದು ತಂದೆಯ ಆದೇಶ ಆ ಹೊಲದಲ್ಲಿ ಮಂಜು ಬೆಳಿಗ್ಗೆಯಿಂದ ಕೆಲಸ ಮಾಡಿದರೆ ತನ್ನ ತಾಯಿ ಅಲ್ಲಿಗೆ ಊಟವನ್ನು ತಂದು ಕೊಡುತ್ತಿದ್ದರು ಜೊತೆಗೆ 50 ರೂಪಾಯಿ ಹಣ ಕೂಡ ಸಿಗುತ್ತಿತ್ತು ಈ ಒಂದು ಹಣದಲ್ಲಿ ಮಂಜು ಅವರು ತಮಗೆ ಬೇಕಾದ ಸಿನಿಮಾಗಳನ್ನು ನೋಡಲು ಸಾಧ್ಯವಾಗುತ್ತಿತ್ತು ತಂದೆಗೆ ಮಗನ ಮೇಲೆ ಅತಿಯಾದ ಮೂರು ಹೆಣ್ಣು ಮಕ್ಕಳ ನಡುವೆ ಒಬ್ಬನೇ ಗಂಡುಮಗ ಎಂದು ಮಗನನ್ನು ಎನಿಲ್ಲದ ಹಾಗೆ ಪ್ರೀತಿಯನ್ನ ಮಾಡುತ್ತಿದ್ದರು.
ಮಂಜು ಅವರನ್ನ ಪೊಲೀಸ್ ದಪ್ಪದಾರರನ್ನಾಗಿ ಮಾಡುವ ಕನಸು ಅವರ ತಂದೆಗೆ ಇತ್ತು ಮಂಜು ನ್ಯಾಷನಲ್ ಕಾಲೇಜುಗೆ ಸೇರಿದಾಗ ಅವರ ಭವಿಷ್ಯ ಬೇರೆ ಕಡೆ ಪ್ರಜ್ವಲಿಸಲಿದೆ ಎಂಬುವುದು ಅವರಿಗೆ ತಿಳಿದಿರಲಿಲ್ಲ ಈ ಮಧ್ಯೆ ನಟ ತರುಣ್ ಅವರ ವಿದ್ಯಾರ್ಥಿ ಎಂಬ ಸಿನಿಮಾ ಸೆಟ್ ಏರಿತ್ತು ಈ ಒಂದು ಚಿತ್ರಕ್ಕೆ ಸಹಾಯಕ ನಿರ್ದೇಶಕರಾಗಿ ಮಂಜು ಆಯ್ಕೆಯಾಗಿದ್ದರು ಇಲ್ಲಿಂದಲೇ ಅವರ ಚಿತ್ರರಂಗದ ಜೀವನ ಶುರುವಾಗಿದ್ದು ಉಗ್ರಂ ಬರುವ ಮೊದಲು ಅನೇಕ ಚಿತ್ರಗಳಲ್ಲಿ ಸುಮಾರು 20 ರಿಂದ 25 ಸಿನಿಮಾಗಳಿಗೆ ಕೆಲಸ ಮಾಡಿದ್ದಾರೆ ತೆರೆಯ ಹಿಂದೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದಂತಹ ಇವರ ಎತ್ತರ ಹಾಗೂ ಆಕರ್ಷಕ ನಿಲುವು ಕಂಡಂತಹ ಕೆಲವೊಂದು ಅಷ್ಟು ಜನರು ಆಡಿಶನ್ ಗೆ ಕರೆದಿದ್ದು ಉಂಟು ನೋಡುವುದಕ್ಕೆ ಬಹಳ ಎತ್ತರ ಬಿಳಿಯ ಬಣ್ಣ ನೋಟ ಖಡಕ್ಕಾಗಿ ಇದ್ದುದರಿಂದ ಅವರಿಗೂ ಸಹ ಹೀರೋ ಆಗುವ ಆಸೆ ಇದ್ದಿದ್ದು ನಿಜ ಆದರೆ ನಾಯಕರಿಗಿಂತ ಇವರೇ ಹೈಟ್ ಇದ್ದಾರೆ ತೆಳ್ಳಗಿದ್ದಾರೆ ಆದ್ದರಿಂದ ಅನೇಕ ಚಿತ್ರಗಳಲ್ಲಿ ಇವರಿಗೆ ಅವಕಾಶ ನೀಡದೆ ನಿರಾಕರಿಸಲಾಯಿತು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.