ರಾಜ್ಯದಲ್ಲಿ ಬಿಜೆಪಿಯನ್ನು ಮಖಾಡೆ ಮಲಗಿಸಿದವನು ಇವನೊಬ್ಬನೇ….! ಮೋದಿಗೂ ಇವರೇ ಬೇಕು, ಯಾರು ಗೊತ್ತಾ ಈ ಪಂಟರ್….?
ಒಂದು ಯುದ್ಧವನ್ನು ಗೆಲ್ಲಬೇಕು ಎಂದರೆ ದೊಡ್ಡ ಸೇನೆ ಇದ್ದರೆ ಸಾಕಾಗುವುದಿಲ್ಲ. ಬಲಿಷ್ಠರು ಇದ್ದರೂ ಸಾಕಾಗುವುದಿಲ್ಲ. ದೊಡ್ಡ ಪ್ರಮಾಣದ ಶಸ್ತ್ರಾಸ್ತ್ರಗಳು ಇದ್ದರೂ ಸಾಕಾಗುವುದಿಲ್ಲ. ಅದಕ್ಕೆ ಜಗತ್ತಿನ ಇತಿಹಾಸದಲ್ಲಿ ನಡೆದ ಹಲವು ಯುದ್ಧಗಳು ಸಾಕ್ಷಿಯಾಗಿದೆ. ಮಹಾ ಭಾರತವನ್ನೇ ತೆಗೆದುಕೊಂಡರು ಕೌರವರ ಸೇನೆಯ ಎದುರು.
ಪಾಂಡವರ ಸೇನೆ ಏನೇನು ಇರಲಿಲ್ಲ. ಆದರೆ ಪಾಂಡವರ ಸೇನೆಯಲ್ಲಿ ಶ್ರೀಕೃಷ್ಣ ಎನ್ನುವಂತಹ ತಂತ್ರಗಾರನಿದ್ದ. ಕೃಷ್ಣ ಯುದ್ಧ ಮಾಡುವುದಕ್ಕೆ ರಣರಂಗಕ್ಕೆ ಇಳಿಯದೆ ಇದ್ದರೂ ಆತನ ತಂತ್ರಗಾರಿಕೆಯೇ ಪಾಂಡವರಿಗೆ ಗೆಲುವು ದಕ್ಕುವಂತೆ ಮಾಡಿತ್ತು. ಇಲ್ಲಿ ಧರ್ಮ ಅಧರ್ಮಗಳ ವಿಚಾರ ಬೇರೆ ಬೇರೆ. ಇನ್ನು ಮೌರ್ಯ ಸಾಮ್ರಾಜ್ಯದ ವಿಷಯವನ್ನೇ ತೆಗೆದು ಕೊಂಡರು ಮೌರ್ಯರು ಅಷ್ಟೊಂದು ದೊಡ್ಡ ಸಾಮ್ರಾಜ್ಯವನ್ನು ಕಟ್ಟುವುದಕ್ಕೆ ಕಾರಣ ಚಾಣಕ್ಯ.
ಚಾಣಾಕ್ಯನ ತಂತ್ರಗಾರಿಕೆಯೆ ಮೌರ್ಯರು ಆ ಪ್ರಮಾಣದಲ್ಲಿ ದಿಗ್ವಿಜಯ ವನ್ನು ಸಾಧಿಸುವುದಕ್ಕೆ ಕಾರಣವಾಯಿತು. ಹೀಗೆ ಒಂದು ಯುದ್ಧ ಗೆಲ್ಲಬೇಕು ಎಂದರೆ ತಂತ್ರಗಾರಿಕೆ ಎನ್ನುವುದು ಬಹಳ ಮುಖ್ಯವಾಗಿರು ತ್ತದೆ. ಈ ಬಾರಿ ಕರ್ನಾಟಕದಲ್ಲಿ ಕಾಂಗ್ರೆಸ್ ಗೆಲುವಿನ ಹಿಂದೆ ಕೂಡ ತಂತ್ರಗಾರಿಕೆ ಇತ್ತು. ಕಾಂಗ್ರೆಸ್ ಗೆಲುವಿನ ಹಿಂದೆ ಇರುವ ಆ ಚಾಣಾಕ್ಷಣ ಹೆಸರು ಸುನಿಲ್. ಸುನಿಲ್ ಕುನಗೋಲು ಹೌದು ಕರುನಾಡಿನಲ್ಲಿ ಕಾಂಗ್ರೆಸ್ ವಿಜಯ ಪತಾಕೆ ಹಾರಿಸುವುದರ ಹಿಂದೆ ಇದ್ದದ್ದು ಇದೇ ಸುನಿಲ್.
ಸುನಿಲ್ ತಂತ್ರಗಾರಿಕೆಯೇ ಇವತ್ತು ಕಾಂಗ್ರೆಸ್ ಅನ್ನು ಇವತ್ತು ರಾಜ್ಯದಲ್ಲಿ ಅಧಿಕಾರಕ್ಕೆ ತಂದು ಕೂರಿಸಿದೆ. ಕಾಂಗ್ರೆಸ್ ನ ಗೆಲುವಿಗೆ ಈ ಬಾರಿ ಹಲವು ಕಾರಣಗಳು ಇದೆ, ಅದರಲ್ಲಿ ಪ್ರಮುಖ ಕಾರಣಗಳನ್ನು ಪಟ್ಟಿ ಮಾಡು ವಾಗ ಮೂರು ಕಾರಣಗಳು ತುಂಬಾ ಮೇಜರ್ ರೋಲ್ ಪ್ಲೇ ಮಾಡಿದೆ ಅದರಲ್ಲಿ ಮೊದಲನೆಯದ್ದು ಪೇ ಸಿಎಂ.
ಎರಡನೇದು ಕಾಂಗ್ರೆಸ್ ನ ಗ್ಯಾರಂಟಿ ಕಾರ್ಡ್, ಮೂರನೇಯದು ಭಾರತ ಜೋಡೋ ಅಭಿಯಾನ, ನಿಮಗೆ ನೆನಪಿರಬಹುದು ಚುನಾವಣೆಗೆ ಏಳೆಂಟು ತಿಂಗಳು ಬಾಕಿ ಇರುವಾಗ ಕಾಂಗ್ರೆಸ್ ಪೇ ಸಿಎಂ ಎಂಬ ಅಭಿಯಾನವನ್ನು ಮಾಡಿಬಿಡುತ್ತದೆ. ಇದೇ ಪೇ ಸಿಎಂ ಅಭಿಯಾನ ಕರ್ನಾಟಕದ ಚುನಾವಣೆಗೆ ಟರ್ನಿಂಗ್ ಪಾಯಿಂಟ್ ಕೊಟ್ಟಿದ್ದು. ಈ ಪೇ ಸಿಎಂ ಅಭಿಯಾನದ ಹಿಂದೆ ಇರುವ ವ್ಯಕ್ತಿ ಇದೇ ಸುನಿಲ್.
ಪೇ ಸಿಎಂ ಅಭಿಯಾನದ ಪರಿಕಲ್ಪನೆ ಮಾಡಿದ್ದು ಪೇ ಸಿಎಂ ಪೋಸ್ಟರ್ ಡಿಸೈನ್ ಮಾಡಿದ್ದು ಇದೇ ಸುನಿಲ್. ಸುನಿಲ್ ಡಿಸೈನ್ ಮಾಡಿದ ಇದೆ ಅಭಿಯಾನ ರಾಜ್ಯದಾದ್ಯಂತ ಭಾರಿ ಸದ್ದನ್ನು ಮಾಡುತ್ತದೆ. ಇದನ್ನು ರಾಜ್ಯದ ಮೂಲೆ ಮೂಲೆಗೂ ಮುಟ್ಟಿಸುತ್ತದೆ ಕಾಂಗ್ರೆಸ್. ಬಿಜೆಪಿ ಸರ್ಕಾರದ ಮೇಲೆ 40% ಕಮಿಷನ್ ಆರೋಪ ಬರುತ್ತಿತ್ತಂತೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.