ವರಮಹಾಲಕ್ಷ್ಮಿ ಯನ್ನು ಯಾವ ಲಗ್ನದಲ್ಲಿ ಕೂರಿಸಬೇಕು ? ಯಾವ ಬಣ್ಣದ ಸೀರೆ ಶುಭ ? ನೈವೇದ್ಯ ಹೇಗೆ
ವರಮಹಾಲಕ್ಷ್ಮಿ ವ್ರತವನ್ನ ಹೆಚ್ಚಾಗಿ ನಮ್ಮ ಕರ್ನಾಟಕ ಹಾಗೆ ಆಂಧ್ರಪ್ರದೇಶ, ತಮಿಳುನಾಡು ಮತ್ತು ಉತ್ತರಪ್ರದೇಶ ರಾಜ್ಯಗಳಲ್ಲಿ ಆಚರಣೆಯನ್ನ ಮಾಡಲಾಗುತ್ತೆ. ಸಂಪತ್ತು ಮತ್ತು ಸಮೃದ್ಧಿಗೆ ಸಂಬಂಧಿಸಿದಂತಹ ಲಕ್ಷ್ಮೀದೇವಿ ಅವತಾರಗಳಲ್ಲಿ ಒಂದಾದಂತಹ ವರಮಹಾಲಕ್ಷ್ಮೀದೇವಿಯನ್ನ ಪೂಜಿಸಲು ಇದು ಬಹಳ ಮುಖ್ಯವಾದಂತಹ ಹಾಗೆ ಶ್ರೇಷ್ಠವಾದಂತಹ ದಿನ ಅಂತಾನೆ ಹೇಳಬಹುದು.
ಜನಪ್ರಿಯ ಪೌರಾಣಿಕ ನಂಬಿಕೆಗಳ ಪ್ರಕಾರ ಕ್ಷೀರಸಾಗರದಿಂದ ವರಮಹಾಲಕ್ಷ್ಮಿ ಅವತರಿಸಿದಳು ಅಂತ ಹೇಳಲಾಗುತ್ತೆ. ವರಮಹಾಲಕ್ಷ್ಮಿಯನ್ನ ಪೂಜಿಸುವುದರಿಂದ ಮನೆಗೆ ಸಮೃದ್ಧಿ ಸುಖ ಶಾಂತಿ ಸಂಪತ್ತು ಎಲ್ಲವೂ ಕೂಡ ದೊರಕುತ್ತೆ ಹಾಗೆ ಭಕ್ತರ ಇಷ್ಟಾರ್ಥಗಳು ಕೂಡ ಈಡೇರುತ್ತದೆ ಅಂತಾನೆ ಹೇಳಲಾಗುತ್ತೆ.
ಇಂತಹ ವರಮಹಾಲಕ್ಷ್ಮಿ ವ್ರತವನ್ನ ಯಾವಾಗಲೂ ಶ್ರಾವಣ ಮಾಸದ ಶುಕ್ಲ ಪಕ್ಷದ ಕೊನೆಯ ಶುಕ್ರವಾರದಂದು ಇದನ್ನ ಆಚರಣೆಯನ್ನ ಮಾಡಲಾಗುತ್ತೆ. ಹಾಗಾಗಿ ಈ ಬಾರಿಯೂ ಕೂಡ ಶ್ರಾವಣ ಮಾಸದ ಶುಕ್ಲ ಪಕ್ಷದ ಕೊನೆಯ ಶುಕ್ರವಾರ ಅಂದ್ರೆ ಆಗಸ್ಟ್ 16ನೇ ತಾರೀಕು ಆಚರಣೆಯನ್ನ ಮಾಡಬೇಕು.
ಆಗಸ್ಟ್ 16ನೇ ತಾರೀಕು ವಿಶೇಷವಾಗಿ ಯಾವ ಲಗ್ನದಲ್ಲಿ ತಾಯಿ ಮಹಾಲಕ್ಷ್ಮಿಯನ್ನ ಕೂರಿಸಿದರೆ ಅಥವಾ ಸ್ಥಾಪನೆಯನ್ನ ಮಾಡಿದ್ರೆ ಬಹಳ ಶ್ರೇಷ್ಠ ಹಾಗೆ ಯಾವ ಲಗ್ನದಲ್ಲಿ ಕೂರಿಸಿದಾಗ ತಾಯಿಗೆ ಯಾವ ಬಣ್ಣದ ಸೀರೆಯನ್ನು ಉಡಿಸಿದರೆ ಇನ್ನು ಅತ್ಯಂತ ಶುಭ ಮತ್ತು ಈ ಬಾರಿ ಆಗಸ್ಟ್ 10 16ನೇ ತಾರೀಕು ಏಕಾದಶಿ ಇದೆ ಹಾಗಾಗಿ ನೈವೇದ್ಯ ಹೇಗೆ ಅರ್ಪಣೆಯನ್ನ ಮಾಡಬೇಕು ಮತ್ತು ಕಲಶ ಯಾವ ರೀತಿ ಇರಬೇಕು ಎಲ್ಲದರ ಮಾಹಿತಿಯನ್ನ ಈ ವಿಡಿಯೋದಲ್ಲಿ ತಿಳಿಸಿಕೊಡ್ತೀನಿ.
ಮೊದಲು ನಾವು ವರಮಹಾಲಕ್ಷ್ಮಿಯನ್ನ ಸ್ಥಾಪನೆಯನ್ನು ಮಾಡಲು ಅಥವಾ ಕೂರಿಸಲು ಯಾವ ಶುಭ ಮುಹೂರ್ತ ಇದೆ ಹಾಗೆ ಯಾವ ಶುಭ ಲಗ್ನದಲ್ಲಿ ಕೂರಿಸಬೇಕು ಮತ್ತು ಯಾವ ಒಂದು ಬಣ್ಣದ ಸೀರೆಯನ್ನು ದೇವಿಗೆ ಸಮರ್ಪಣೆಯನ್ನ ಮಾಡಬೇಕು ಅಂತ ನೋಡೋಣ.
ಮೊದಲನೇ ಲಗ್ನ ಬಂದು ಸಿಂಹ ಲಗ್ನ ಸಿಂಹ ಲಗ್ನದ ಅಧಿಪತಿ ಗ್ರಹ ಸೂರ್ಯ ಗ್ರಹ ಹಾಗೆ ಪೂಜೆಯ ಮುಹೂರ್ತದ ಸಮಯ ಬೆಳಗ್ಗೆ 5:57 ರಿಂದ 8:14 ರವರೆಗೂ ಕೂಡ ಸಿಂಹ ಲಗ್ನ ಇರುತ್ತೆ. ಹಾಗಾಗಿ ನೀವು ಈ ಸಮಯದಲ್ಲಿ ಈ ಲಗ್ನದಲ್ಲಿ ದೇವಿಯನ್ನ ಸ್ಥಾಪನೆಯನ್ನ ಮಾಡಿಕೊಳ್ಳಬಹುದು ಹಾಗೆ ಯಾವ ಬಣ್ಣದ ಸೀರೆ ನೀವೇನಾದ್ರೂ ಈ ಒಂದು ಲಗ್ನದಲ್ಲಿ ಪೂಜೆಯನ್ನ ಮಾಡಿಕೊಳ್ಳುತ್ತೀರಾ ಅಂತಂದ್ರೆ ಗೋಲ್ಡ್ ಕಲರ್ ಅಂದ್ರೆ ಚಿನ್ನದ ಬಣ್ಣ ಆಗಿರಬಹುದು ಅಥವಾ ಕಿತ್ತಳೆ ಬಣ್ಣ ಮತ್ತು ಕೆಂಪು ಬಣ್ಣ ಹಾಗೆ ಹಳದಿ ಬಣ್ಣದ ಸೀರೆಗಳನ್ನ ದೇವಿಗೆ ಉಡಿಸಬಹುದು.
ನೀವೇನಾದ್ರೂ ನಾವು ಈಗಾಗಲೇ ಸೀರೆಯನ್ನು ತಂದಿದ್ದೀವಿ ಏನ್ ಮಾಡೋದು ಅಂತ ಅಂದ್ರೆ ನೀವು ಬೇಕಿದ್ರೆ ಬ್ಲೌಸ್ ಪೀಸ್ ಅನ್ನಾದರೂ ತೆಗೆದು ದೇವಿಗೆ ಆದ್ರೆ ಇದೇ ಬಣ್ಣದ ಬ್ಲೌಸ್ ಪೀಸ್ ಗಳನ್ನಾದರೂ ಈ ಲಗ್ನದಲ್ಲಿ ಕೂರಿಸುವವರು ವರಮಹಾಲಕ್ಷ್ಮಿಗೆ ಉಡಿಸಬಹುದು.
ಇನ್ನು ಎರಡನೇ ಲಗ್ನ ಬಂದು ವೃಶ್ಚಿಕ ಲಗ್ನ ಈ ಲಗ್ನಕ್ಕೆ ಅಧಿಪತಿ ಗ್ರಹ ಬಂದು ಮಂಗಳ ಇನ್ನು ಪೂಜೆಯ ಮುಹೂರ್ತ ಬಂದು ಮಧ್ಯಾಹ್ನದ ಪೂಜೆ ಇರುತ್ತೆ. ವೃಶ್ಚಿಕ ಲಗ್ನದಲ್ಲಿ 12:50 ರಿಂದ ಮೂರು ಎಂಟರವರೆಗೆ ಮಧ್ಯಾಹ್ನ ಮೂರು ಎಂಟರವರೆಗೆ ನೀವು ವರಮಹಾಲಕ್ಷ್ಮಿಯನ್ನ ಯಾರು ಮೊದಲನೇ ಒಂದು ಲಗ್ನಕ್ಕೆ ಆಗಲಿಲ್ಲ ಅವರು ಈ ಲಗ್ನದಲ್ಲಿ ಪ್ರತಿಷ್ಠಾಪನೆಯನ್ನ ಮಾಡಿಕೊಳ್ಳಬಹುದು.
ಹಾಗೆ ಯಾರು ವೃಶ್ಚಿಕ ಲಗ್ನದಲ್ಲಿ ದೇವಿಯನ್ನ ಪ್ರತಿಷ್ಠಾಪನೆಯನ್ನ ಮಾಡ್ತೀರಾ ಅವರು ಕೆಂಪು ಬಣ್ಣದ ಸೀರೆ ಅಥವಾ ಮರೂನ್ ಬಣ್ಣದ ಸೀರೆಯನ್ನು ಉಡಿಸಿಕೊಳ್ಳಬಹುದು ಸೀರೆ ಆಗಲಿಲ್ಲ ಅಂದ್ರು ಕೂಡ ಈ ಬಣ್ಣದ ರವಿಕೆ ಬಟ್ಟೆ ಅಥವಾ ಬ್ಲೌಸ್ ಪೀಸ್ ಅಂತ ಏನು ಹೇಳ್ತಿವಿ ಇದನ್ನಾದರೂ ನೀವು ದೇವಿಗೆ ಉಡಿಸಬಹುದು. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನ ಸಂಪೂರ್ಣವಾಗಿ ವಿಕ್ಷೀಸಿ.