ಸಾಕ್ಷಾತ್ ಶನಿ ದೇವರು ಯಾರನ್ನು ನೋಡಿದರೆ ಭಯ ಪಡ್ತಾನೆ ಗೊತ್ತಾ ? ಶನಿ ದೇವರಿಗೂ ಭಯ ಇದೆಯಾ ಈ ಕಥೆ ಕೇಳಿ ಪುಣ್ಯ ಲಭಿಸುತ್ತೆ.ಶನಿದೇವ ಯಾರನ್ನು ನೋಡಿದರೆ ಭಯಪಡುತ್ತಾನೆ ಗೊತ್ತಾ! ಇಡೀ ಜಗತ್ತೇ ಶನಿದೇವನನ್ನು ನೋಡಿದರೆ ಭಯಪಡುವಾಗ ಶನಿಯು ಇತರರನ್ನು ನೋಡಿ ಭಯಪಡುತ್ತಾನೆ.ಶನಿದೇವ ಕೆಲವು ವಸ್ತುಗಳಿಗೆ ಕೆಲವು ದೇವರುಗಳಿಗೆ ಭಯಪಡುತ್ತಾನಂತೆ, ಅದು ಯಾವುದು ಎಂದು ಈ ವಿಡಿಯೋದಲ್ಲಿ ನೋಡೋಣ.ಸೂರ್ಯಪುತ್ರನಾದ ಶನಿದೇವನಿಗೆ ಸಾಮಾನ್ಯವಾಗಿ ಎಲ್ಲರೂ ಕೂಡ ಭಯಪಡುತ್ತಾರೆ .ಶನಿದೇವನದ್ದು ಕೋಪದ ಸ್ವಭಾವ ಆತ ಇತರೆ ಗ್ರಹಗಳಿಗೆ ತೊಂದರೆಯನ್ನು ಮಾಡುತ್ತಾನೆಂದು ಹೆದರುವುದುಂಟು.

WhatsApp Group Join Now
Telegram Group Join Now

ಆದರೆ ಶನಿಗೂ ಕೂಡ ಭಯಪಡುವ ಗುಣವಿದೆ ಈತನು ಕೂಡ ಕೆಲವು ವ್ಯಕ್ತಿಗಳಿಗೆ ವಸ್ತುಗಳಿಗೆ ಹೆದರುತ್ತಾನೆ .ಶನಿ ಯಾವಾಗಲೂ ನ್ಯಾಯವನ್ನೇ ಅನುಸರಿಸುವವನು ಆದ್ದರಿಂದ ಪರಶಿವನು ಶನಿಯನ್ನು ನವಗ್ರಹಗಳ ನ್ಯಾಯಾಧೀಶನನ್ನಾಗಿ ಮಾಡಿರುವುದು.

ಇಡೀ ಜಗತ್ತೇ ಶನಿ ದೇವರಿಗೆ ಭಯಪಡುವಾಗ ಸ್ವತಃ ಶನಿಯೇ ಯಾವೆಲ್ಲಾ ವಸ್ತುಗಳಿಗೆ ಯಾವೆಲ್ಲಾ ದೇವರುಗಳಿಗೆ ಭಯಪಡುತ್ತಾನೆ ಎಂದು ನೋಡೋಣ .ಶನಿದೇವನು ಸೂರ್ಯದೇವ ಮತ್ತು ಆತನ ಎರಡನೇ ಪತ್ನಿ ಛಾಯಾಳ ಮಗನೆಂದು ಪುರಾಣಗಳಲ್ಲಿ ಹೇಳಲಾಗಿದೆ. ಒಮ್ಮೆ ಕೋಪಗೊಂಡ ಸೂರ್ಯದೇವನು ತನ್ನ ಸ್ವಂತ ಮಗನಾದ ಶನಿಗೆ ಶಾಪವನ್ನು ನೀಡುತ್ತಾನೆ.

ಇದರ ನಂತರ ತನ್ನ ತಂದೆಗೆ ಹೆದರಿದ ಶನಿಯು ತಂದೆಯನ್ನು ಒಲಿಸಿಕೊಳ್ಳಲು ಕಪ್ಪು ಎಳ್ಳಿನಿಂದ ಪೂಜೆಯನ್ನು ಮಾಡುತ್ತಾನೆ, ಹಾಗೂ ಇದರಿಂದ ಸೂರ್ಯದೇವನು ಸಂತಸಗೊಳ್ಳುತ್ತಾನೆ ಕೂಡ ಈ ಘಟನೆಯ ನಂತರ ಶನಿಯು ತನ್ನ ತಂದೆಯನ್ನು ಕಪ್ಪು ಎಳ್ಳಿನಿಂದಲೇ ಪೂಜಿಸಲು ಆರಂಭಿಸುತ್ತಾನೆ. ಶನಿದೇವನು ಹನುಮಂತನನ್ನು ನೋಡಿದರೆ ಹೆದರುತ್ತಾನೆ ಎಂಬ ನಂಬಿಕೆ ಇದೆ.

ಶನಿಗೂ ಹಾಗೂ ಹನುಮಂತನಿಗೂ ಒಮ್ಮೆ ಜಗಳವಾದಾಗ ಹನುಮಂತನಿಂದ ಶನಿಯು ವಿಪರೀತ ಮೈಕೈ ನೋವನ್ನು ಅನುಭವಿಸಿದ್ದನಂತೆ ಆದ್ದರಿಂದ ಶನಿ ದೋಷವಿರುವವರು ತಮ್ಮ ದೋಷವನ್ನು ನಿವಾರಿಸಿಕೊಳ್ಳಲು ಹನುಮಂತನನ್ನು ಹೆಚ್ಚಾಗಿ ಪ್ರಾರ್ಥಿಸಬೇಕು .ಆಗಾಗ ಹನುಮಂತನ ದೇವಾಲಯಕ್ಕೆ ಹೋಗಿ ಹನುಮಂತನ ಆಶೀರ್ವಾದವನ್ನು ಪಡೆದುಕೊಳ್ಳಬೇಕು. ಕೃಷ್ಣನು ಜ್ಞಾನಿ ಎಲ್ಲವನ್ನು ಅರಿತವನು ಶ್ರೀಕೃಷ್ಣ ತನ್ನ ಲೀಲೆಯ ಮೂಲಕ ಜಗತ್ತಿಗೆ ಒಳ್ಳೆಯದನ್ನೇ ಕರುಣಿಸುವ ಗುಣವುಳ್ಳವನೀತ .

ಶನಿಯು ಒಮ್ಮೆ ಕೃಷ್ಣನನ್ನು ನೋಡಬೇಕೆಂದು ಕೋಗಿಲ ಧಾಮದಲ್ಲಿ ತಪಸ್ಸಿಗೆ ಕುಳಿತುಕೊಳ್ಳುತ್ತಾನೆ. ಈತನ ಕಠಿಣ ತಪಸ್ಸಿಗೆ ಒಲಿದ ಕೃಷ್ಣನು ಕೋಗಿಲೆಯ ರೂಪವನ್ನು ಧರಿಸಿ ಶನಿಯ ಮುಂದೆ ಪ್ರತ್ಯಕ್ಷನಾಗುತ್ತಾನೆ.ಕೃಷ್ಣನನ್ನು ನೋಡಿ ಸಂತಸಗೊಂಡ ಶನಿಯು ತಾನು ಇನ್ನು ಮುಂದೆ ಕೃಷ್ಣನ ಯಾವುದೇ ಭಕ್ತರಿಗೂ ಕೂಡ ತೊಂದರೆಯನ್ನು ಕೊಡಲಾರೆ ಎಂದು ಹೇಳುತ್ತಾನೆ.

ಪೌರಾಣಿಕ ನಂಬಿಕೆಗಳ ಪ್ರಕಾರ ಶನಿಯು ಅರಳಿ ಮರಕ್ಕೆ ಹೆದರುತ್ತಾನಂತೆ ಆದ್ದರಿಂದ ಶನಿವಾರದಂದು ಅರಳಿ ಮರದ ಕೆಳಗೆ ಸಾಸಿವೆ ಎಣ್ಣೆಯ ದೀಪವನ್ನು ಹಚ್ಚುವುದರಿಂದ ಶನಿಯು ಪ್ರಸನ್ನನಾಗುತ್ತಾನಂತೆ.ಪಿಪ್ಪಲಾದ ಮುನಿಯನ್ನು ಅಥವಾ ಅರಳಿ ಮರವನ್ನು ಪೂಜಿಸುವ ವ್ಯಕ್ತಿಗಳಿಗೆ ಹೆಚ್ಚು ಋಣಾತ್ಮಕ ಪ್ರಭಾವವನ್ನು ಬೀರಲಾರನೆಂದು ಧರ್ಮ ಗ್ರಂಥಗಳಲ್ಲಿ ಹೇಳಲಾಗಿದೆ .ಆಗಿದೆ ಶನಿಯು ತನ್ನ ಹೆಂಡತಿಗೂ ಕೂಡ ಹೆದರುತ್ತಾನೆ ಎಂದು ಕೆಲವು ಮೂಲಗಳು ತಿಳಿಸುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶನಿ ಇರುವ ಸ್ಥಾನದಲ್ಲಿ ಶನಿಯ ಹೆಂಡತಿಯ ಹೆಸರನ್ನು ಜಪಿಸುವಂತೆ ಶನಿ ಪರಿಹಾರವನ್ನು ನೀಡಲಾಗಿದೆ.

ದಂತ ಕಥೆಗಳ ಪ್ರಕಾರ ಒಮ್ಮೆ ಶನಿದೇವನ ಪತ್ನಿಯು ಸ್ನಾನ ಮಾಡಿ ತನ್ನ ಪತಿ ಇದ್ದಲ್ಲಿಗೆ ಬರುತ್ತಾಳೆ. ಆಗ ಶ್ರೀಕೃಷ್ಣನ ಧ್ಯಾನದಲ್ಲಿ ಮುಳುಗಿದ್ದ ಶನಿಯು ತನ್ನ ಹೆಂಡತಿಯತ್ತ ಗಮನಹರಿಸುವುದಿಲ್ಲ.ಇದರಿಂದ ಕೋಪಗೊಂಡ ಪತ್ನಿಯು ಶನಿಗೆ ಶಾಪವನ್ನು ನೀಡುತ್ತಾಳೆ. ಒಮ್ಮೆ ಶಿವನ ಮತ್ತು ಶನಿಯ ನಡುವೆ ಜಗಳವಾದಾಗ ಶಿವನಿಂದ ಶನಿಯು ಹಾನಿಗೊಳಗಾಗುತ್ತಾನೆ.ಆಗ ಶಿವನು ಸೂರ್ಯದೇವನ ಕೋರಿಕೆಯ ಮೇರೆಗೆ ಆತನನ್ನು ಸರಿಪಡಿಸುತ್ತಾನೆ. ಅಂದಿನಿಂದ ಶಿವನನ್ನು ಶನಿಯು ಪೂಜನೀಯ ಭಾವನೆಯಿಂದ ಕಾಣುತ್ತಾನೆ ಹಾಗೂ ಶಿವನನ್ನು ನೋಡಿದರೆ ಭಯಪಡುತ್ತಾನೆ.ಸರ್ವಂ ಶ್ರೀಕೃಷ್ಣಾರ್ಪಣಮಸ್ತು.

By god