ಅಂಗೈಲಿ ಆಕಾಶ ಮತದಾರ ಮೂಗಿಗೆ ತುಪ್ಪ ಮೂರು ಪಕ್ಷಗಳ ಪ್ರಣಾಳಿಕೆಯಲ್ಲಿ ಎಷ್ಟೆಲ್ಲಾ ಸುಳ್ಳು…ಫ್ರೀ ಫ್ರೀ ಮನೆಗೆ ಹಾಲು ಫ್ರೀ ಬಸ್ಸಲ್ಲಿ ಓಡಾಡುವ ಮಹಿಳೆಯರಿಗೆ ಟಿಕೆಟ್ ಫ್ರೀ ರೇಷನ್ ಫ್ರೀ ಕರೆಂಟ್ ಫ್ರೀ ಸಿಲಿಂಡರ್ ಫ್ರೀ ಆರೋಗ್ಯ ಫ್ರೀ ಶಿಕ್ಷಣ ಫ್ರೀ ಚುನಾವಣೆ ಮುಗಿಯುವವರೆಗೆ ಎಲ್ಲಾ ಫ್ರೀ ಆಮೇಲೆ ನೀವು ಯಾರು ಅನ್ನುವುದೇ ಗೊತ್ತಿಲ್ಲ ಹೋಗ್ರಿ ಇದು ನಮ್ಮರಾಜಕೀಯ.
ಪಕ್ಷಗಳು ಮತದಾರರನ್ನು ನಡೆಸಿಕೊಳ್ಳುತ್ತಿರುವ ರೀತಿ ಈ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷಗಳು ಪ್ರಾದೇಶಿಕ ಪಕ್ಷಗಳು ಎಲ್ಲರೂ ತಮ್ಮ ತಮ್ಮ ಅಭ್ಯರ್ಥಿಗಳನ್ನ ಕಣಕ್ಕಿಳಿಸಿದ್ದಾರೆ ಆದರೆ ಕರ್ನಾಟಕದಲ್ಲಿ ಗಟ್ಟಿಯಾಗಿ ತಳಹುಳಿರುವ ಮೂರು ಪಕ್ಷಗಳ ಬಗ್ಗೆ ನಾನು ನಿಮಗೆ ಒಂದಷ್ಟು ಮಾಹಿತಿಯನ್ನ ಕೊಡುವ ಪ್ರಯತ್ನ ಮಾಡುತ್ತಿದ್ದೇನೆ ನಿಮ್ಮ ಪಾರ್ಟಿ ಯಾವುದೇ ಆಗಿರಲಿ ನಿಮ್ಮ.
ಸಿದ್ದಾಂತ ಏನೇ ಇರಲಿ ನೀವು ಯಾರಿಗೆ ಬೇಕಾದರೂ ವೋಟು ಹಾಕಿಕೊಳ್ಳಿ ಆದರೆ ಈ ರಾಜ್ಯದ ಜವಾಬ್ದಾರಿಯುತ ಮತದಾರರಾಗಿ ಈ ರಾಜ್ಯವನ್ನ ಹಿಂದೆ ಆಳಿರುವ ಈ ಮೂರು ಪಕ್ಷಗಳು ಚುನಾವಣೆಯ ಸಂದರ್ಭದಲ್ಲಿ ಯಾವ ರೀತಿಯ ಆಶ್ವಾಸನೆಗಳನ್ನು ಕೊಡುತ್ತಿವೆ ಎನ್ನುವುದನ್ನು ತಿಳಿದುಕೊಳ್ಳಬೇಕು ಮತ್ತು ಅರ್ಥಮಾಡಿಕೊಳ್ಳ ಬೇಕಾಗಿರುವುದು ನಿಮ್ಮ ಜವಾಬ್ದಾರಿ.
ಹೀಗಾಗಿ ಇದನ್ನು ನಿಮ್ಮ ಮುಂದೆ ಇಟ್ಟು ಬಿಡುತ್ತೇನೆ ಇಲ್ಲಿಯ ಭರವಸೆಗಳೇನು? ಅವುಗಳ ಪೈಕಿ ಎಷ್ಟನ್ನ ಈಡೇರಿಸುವುದಕ್ಕೆ ಸಾಧ್ಯವಾಗುತ್ತದೆ ಇನ್ನು ಎಷ್ಟು ಮರೆತು ಹೋಗುತ್ತವೆ ಈ ಫ್ರೀಗಳನ್ನು ನಾವು ಎಷ್ಟರಮಟ್ಟಿಗೆ ನಂಬಬಹುದು ಎನ್ನುವುದನ್ನ ಒಂದಷ್ಟು ಮಾಹಿತಿಯ ಮೂಲಕ ನೋಡೋಣ.ಮೊದಲಿಗೆ ಜೆಸಿಬಿ ಪಕ್ಷಗಳ ಪ್ರಣಾಳಿಕೆಯಲ್ಲಿ ಪ್ರಮುಖವಾಗಿ ಹೇಳುತ್ತಿರುವ.
ಅಂಶವನ್ನು ನಿಮ್ಮ ಮುಂದೆ ಇಡುತ್ತೇನೆ ಕಾಂಗ್ರೆಸ್ ಪಕ್ಷ ಈ ಬಾರಿ 5 ಗ್ಯಾರಂಟಿಗಳನ್ನು ಕೊಟ್ಟಿದೆ ಆ ಗ್ಯಾರೆಂಟಿ ಕೊಡುವುದರ ಜೊತೆಗೆ ಮನೆಮನೆಗೂ ಗ್ಯಾರಂಟಿ ಕಾರ್ಡ್ಗಳನ್ನು ಕೂಡ ಹಂಚುತ್ತಿದೆ ಆ ಗ್ಯಾರಂಟಿಗಳಲ್ಲಿ ಪ್ರತಿ ಮನೆಗೆ 200 ಯೂನಿಟ್ ವಿದ್ಯುತ್ತನ್ನು ಫ್ರೀ ಕೊಡುತ್ತೇವೆ ಪ್ರತಿ ಕುಟುಂಬದ ಮಹಿಳೆಗೆ ಗೃಹಲಕ್ಷ್ಮಿ ಯೋಜನೆ ಅಡಿ ಪ್ರತಿ ತಿಂಗಳು 2000 ಕೊಡುತ್ತೇವೆ ಎಂದು ಹೇಳುತ್ತಿದೆ ಇದು.
ಬಿಪಿಎಲ್ ಕುಟುಂಬಗಳಿಗ ಟ್ಯಾಕ್ಸ್ ಕಟ್ಟುವವರಿಗ ಅಥವಾ ಟ್ಯಾಕ್ಸ್ ಕಟ್ಟದೇ ಇರುವವರೆಗೂ ಅಥವಾ ಎಲ್ಲರಿಗೂ ಕೊಡುತ್ತಾರೋ ಇದರ ಬಗ್ಗೆ ಕಾಂಗ್ರೆಸ್ ಸ್ಪಷ್ಟನೆಯನ್ನು ಕೊಡುತ್ತಿಲ್ಲ ಹೀಗಾಗಿ ಇದನ್ನು ಎಷ್ಟು ನಂಬಬೇಕೋ ಗೊತ್ತಿಲ್ಲ ಈ ಹಿಂದೆ ಹಿಮಾಚಲ ಪ್ರದೇಶದಲ್ಲೂ ಇಂಥದ್ದೇ ಭರವಸೆಯನ್ನ ಕೊಟ್ಟಿದ್ದರು ಆದರೆ ಅದು ಇದುವರೆಗೆ ಅಲ್ಲಿ ಈಡೇರಿಲ್ಲ ಆದರೆ ಕೂಡ ಇಲ್ಲೂ 200.
ಯೂನಿಟ್ ವಿದ್ಯುತ್ ಫ್ರೀ ಗೃಹಲಕ್ಷ್ಮಿ ಅಡಿಯ ಯೋಜನೆಯಲ್ಲಿ ಪ್ರತಿ ಮಹಿಳೆಗೆ 2,000 ಹಣ ವನ್ನು ಪ್ರತಿ ತಿಂಗಳು ಕೊಡುತ್ತೇವೆ ಎಂದು ಇವರು ಹೇಳಿಕೊಳ್ಳುತ್ತಿದ್ದಾರೆ ಹಾಗೆ ಅನ್ನಭಾಗ್ಯ ಕಾರ್ಯಕ್ರಮದ ಅಡಿಯಲ್ಲಿ ಪ್ರತಿ ವ್ಯಕ್ತಿಗೆ 10 ಕೆಜಿ ಅಕ್ಕಿಯನ್ನು ಫ್ರೀ ಕೊಡುತ್ತಾರಂತೆ ಇನ್ನು ಪದವಿ ಪಡೆದ ನಿರುದ್ಯೋಗಿಗಳಿಗೆ ಪ್ರತಿ ತಿಂಗಳು 3000 ಹಣ ಕೊಡುತ್ತಾರಂತೆ ಡಿಪ್ಲೋಮೋ.
ಮಾಡಿಕೊಂಡವರಿಗೆ ಒಂದುವರೆ ಸಾವಿರ ರೂಪಾಯಿಗಳನ್ನ ನಿರುದ್ಯೋಗ ಬತ್ಯ ಎಂದು ಕೊಡುತ್ತಾರಂತೆ ಪ್ರತಿ ತಿಂಗಳು ಪದವೀಧರರಿಗೆ 3000 ಕೊಟ್ಟು ಮನೆಗೆ ಅಕ್ಕಿ ಕೊಟ್ಟು ಗೃಹಲಕ್ಷ್ಮಿ ಯೋಜನೆಯಡಿಯಲ್ಲಿ 2000 ಕೊಟ್ಟರೆ ಪದವೀಧರ ಗಂಡ ಹೆಂಡತಿ ಇಬ್ಬರಿಗೂ ಆರು ಸಾವಿರ ರೂಪಾಯಿ ಅದರ ಮೇಲೆ ಹೆಂಡತಿಗೆ ಮತ್ತೆ ಎರಡು ಸಾವಿರ ರೂಪಾಯಿ ಅಲ್ಲಿಗೆ ತಿಂಗಳಿಗೆ.
8,000 ಹಣ ಫ್ರೀ ರೇಶನ್ ಹೆಣ್ಣು ಮಕ್ಕಳಿಗೆ ಓಡಾಡುವುದಕ್ಕೆ ಬಸ್ಸಿನಲ್ಲಿ ಟಿಕೆಟ್ ತೆಗೆದುಕೊಳ್ಳಬೇಕಾಗಿಲ್ಲ ಫ್ರೀ ಪ್ರಯಾಣ ಇಷ್ಟಾದ ಮೇಲೆ ಇನ್ನು ನಾವು ಕೆಲಸ ಏಕೆ ಮಾಡಬೇಕು ಸರ್ಕಾರಕ್ಕೆ ಟ್ಯಾಕ್ಸ್ ಯಾಕೆ ಕಟ್ಟಬೇಕು ಇಷ್ಟೆಲ್ಲ ಕಷ್ಟ ಯಾಕೆ ಪಡಬೇಕು ಆರಾಮವಾಗಿ ಸರ್ಕಾರ ಕೊಡುವುದನ್ನು ತಿಂದುಕೊಂಡು ಮನೆಯಲ್ಲಿ ಇದ್ದರೆ ಆಯಿತು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.