ಬಂಧುಗಳೇ ನಮಸ್ಕಾರ ನಮ್ಮೆಲ್ಲರಿಗೂ ಒಂದು ಲೆಕ್ಕಾಚಾರ ಇರುತ್ತೆ ಹಣ ಇದ್ದ ಮಾತ್ರಕ್ಕೆ ನೆಮ್ಮದಿ ಸುಖ ಯಶಸ್ಸು ಶಾಂತಿ ಎಲ್ಲವೂ ಇರುತ್ತೆ ಅಂತ. ಹೌದು ಹಣ ಯಶಸ್ಸು ನಮಗೆ ತಕ್ಕಮಟ್ಟಿಗೆ ನೆಮ್ಮದಿ ಕೊಡಬಹುದು.ಹಣವೇ ನಮಗೆ ನೆಮ್ಮದಿ ಅಲ್ವೇ ಅಲ್ಲ.ಅದೆಷ್ಟೋ ಮಂದಿಗೆ ಹಣ ಇರುತ್ತೆ ಖ್ಯಾತಿ ಇರುತ್ತೆ ಐಶ್ವರ್ಯ ಇರುತ್ತೆ ಐಶಾರಾಮಿ ಬಂಗಲಿ ಐಶಾರಾಮಿ ಕಾರು ಎಲ್ಲವೂ ಇರುತ್ತೆ.ಆದರೆ ನೆಮ್ಮದಿ ಇಲ್ಲದೆ ಒದ್ದಾಡ್ತಾ ಇರ್ತಾರೆ.ಅದರಲ್ಲೂ ಕೂಡ ನಾವು ಅಂದುಕೊಳ್ಳುತ್ತೇವೆ ಈ ಸೆಲೆಬ್ರಿಟಿಸ್ ಗಳು ಕೋಟ್ಯಾಂತರ ರೂಪಾಯಿ ಹಣವನ್ನು ಇಟ್ಟುಕೊಂಡು ನೆಮ್ಮದಿಯಿಂದ ನಿದ್ರೆ ಮಾಡ್ತಾರೆ ಯಾವುದೇ ರೀತಿಯಾದ ಸಮಸ್ಯೆಗಳು ಕೂಡ ಇರೋದಿಲ್ಲ ಅಂತ.ಆದರೆ ನಾವೊಂದು ಕೊಂಡ ಹಾಗೆ ಜೀವನ ಇರೋದಿಲ್ಲ ಎಲ್ಲರೂ ಕೂಡ ಕೋಟಿ ಕೋಟಿ ಹಣ ಇದ್ರೂ ಕೂಡ ನೆಮ್ಮದಿಯನ್ನ ಹುಡ್ಕೊಂಡು ಎಲ್ಲೋ ಹೋಗ್ತಿರ್ತಾರೆ.

WhatsApp Group Join Now
Telegram Group Join Now

ಇತ್ತೀಚಿಗಷ್ಟೇ ನಟ ರಜನಿಕಾಂತ್ ಅಂತಹದೊಂದು ಸ್ಟೇಟ್ಮೆಂಟ್ ಅನ್ನು ಕೊಟ್ಟಿದ್ದರು. ನನ್ನತ್ರ ಬೇಕಾದಷ್ಟು ಹಣ ಇದೆ ಯಶಸ್ವಿದೆ ಖ್ಯಾತಿ ಇದೆ ಎಲ್ಲವೂ ಇದೆ ಆದರೆ ನನಗೆ ನೆಮ್ಮದಿ ಅನ್ನೋದೇ ಇಲ್ಲ ಎಂಬ ಮಾತನ್ನು ಹೇಳಿದರು‌‌. ಆಗ ಎಲ್ಲರೂ ಕೂಡ ಅವರ ಮಾತನ್ನು ಚರ್ಚೆ ಮಾಡೋದಕ್ಕೆ ಶುರು ಮಾಡಿದರು‌ಅಂತಹ ಸೂಪರ್ ಸ್ಟಾರ್ ಗೆ ನೆಮ್ಮದಿ ಇಲ್ಲ ಅಂದ್ರೆ ನಾವು ನಂಬುವುದಕ್ಕೆ ಸಾಧ್ಯವಿಲ್ಲ‌‌.ಬಂಧುಗಳೇ ಈ ಬದುಕೇ ಹಾಗೆ ನೋಡಿ ಇಷ್ಟೆಲ್ಲಾ ಪೀಠಿಕೆ ಹಾಕೋದಕ್ಕೆ ಕಾರಣ ನಟ ದುಲ್ಕರ್ ಸಲ್ಮಾನ್. ನಟ ಹಾಗೂ ಖ್ಯಾತ ನಿರ್ಮಾಪಕ ದುಲ್ಕರ್ ಸಲ್ಮಾನ್ ಅಂದ್ರೆ ಯಾರಿಗ್ತಾನೆ ಗೊತ್ತಿರಲ್ಲ ಹೇಳಿ ಮಲಯಾಳಂ ನಟ ಆದ್ರೂ ಕೂಡ ಇಡೀ ಭಾರತಕ್ಕೆ ಚಿರಪರಿಚಿತವಾದಂತಹ ನಟ‌ಅದಕ್ಕೆ ಕಾರಣ ಅವರ ಅದ್ಭುತವಾದ ಸಿನಿಮಾಗಳು ಅದಕ್ಕೂ ಮೀರಿ ಕೆಲವೇ ಕೆಲವು ಸವ್ಯಸಾಚಿ ನಟರಲ್ಲಿ ಕೆಲವೇ ಕೆಲವು ಸರಳ ನಟರಲ್ಲಿ ದುಲ್ಕರ್ ಸಲ್ಮಾನ್ ಕೂಡ ಒಬ್ಬರು ಲ.

ತಂದೆ ಸೂಪರ್ ಸ್ಟಾರ್ ಮೊಮ್ಮಟ್ಟಿ ಆದರೆ ದುಲ್ಕರ್ ಸಲ್ಮಾನ್ಗೆ ಅಹಂಕಾರ ಇಲ್ಲ.ಇಂತಹ ದುಲ್ಕರ್ ಸಲ್ಮಾನ್ ಇದೀಗ ನನಗೆ ನಿದ್ರೆ ಬರ್ತಾ ಇಲ್ಲ ನಾನು ಮಾನಸಿಕ ತೊಳಲಾಟದಿಂದ ಒದ್ದಾಡ್ತಾ ಇದೀನಿ ಹೇಳಿಕೊಳ್ಳಲಾರದಂತಹ ಸಮಸ್ಯೆಯಿಂದ ಬಳಲುತ್ತಾ ಇದ್ದೀನಿ ಎಂದು ವಿಡಿಯೋ ಮಾಡಿ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ರು.ಅದಾದ ಕೆಲವೇ ಕ್ಷಣಗಳಲ್ಲಿ ಆ ವಿಡಿಯೋನ ಡಿಲೀಟ್ ಕೂಡ ಮಾಡಿದ್ದಾರೆ.ಆದರೆ ದುಲ್ಕರ್ ಸಲ್ಮಾನ್ ಕಣ್ಣೀರಿಟ್ಟಿರುವ ಆ ವಿಡಿಯೋ ಈಗ ಎಲ್ಲಾ ಕಡೆ ವೈರಲ್ ಆಗ್ತಾ ಇದೆ.ಹಾಗಾದ್ರೆ ದುರ್ಕರ್ ಸಲ್ಮಾನ್ ಗೆ ಏನಾಯ್ತು ಕೋಟಿ ಕೋಟಿ ಒಡೆಯನಾಗಿದ್ದರೂ ಕೂಡ ಸೂಪರ್ ಸ್ಟಾರ್ ಮಗನಾಗಿದ್ದರೂ ಕೂಡ ಸ್ವತಃ ತಾನೇ ಸೂಪರ್ ಸ್ಟಾರ್ ಆಗಿದ್ರು ಕೂಡ ನೆಮ್ಮದಿ ಇಲ್ದಲೇ ಒದ್ದಾಡ್ತಾ ಇದ್ದಾರೆ.

ದುಲ್ಕರ್ ಒಂದಷ್ಟು ಜನರಿಗೆ ಪರಿಚಿತ ನಟ ಆದರೆ ಕೆಲವೊಂದು ಜನರಿಗೆ ಈ ನಟ ಯಾರು ಅಂತ ಗೊತ್ತಿಲ್ಲ.ದುಬೈನಲ್ಲಿ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುತ್ತಾರೆ ಎಂಬಿಎ ಮುಗಿಸಿ ಆದ ಬಳಿಕ ಮುಂಬೈನ ಆಕ್ಟಿಂಗ್ ಸ್ಕೂಲ್ಗೆ ಹೋಗ್ತಾರೆ. ಕೆಲ ತಿಂಗಳುಗಳ ಕಾಲ ಅಲ್ಲಿ ಟ್ರೈನಿಂಗ್ ಪಡೆದುಕೊಂಡು ಬರ್ತಾರೆ ಟ್ರೈನಿಂಗ್ ಆದ ನಂತರ ಸಿನಿಮಾ ಇಂಡಸ್ಟ್ರಿ ಗೆ ಎಂಟ್ರಿ ಕೊಡ್ತಾರೆ 2011ರಲ್ಲಿ ಸೆಕೆಂಡ್ ಶೋ ಎನ್ನುವಂತಹ ಸಿನಿಮಾ ಮಿಕ್ಸೆಡ್ ರಿವೀವ್ಸ್ ಬರುತ್ತೆ.ಅದಾದ ನಂತರ ಬಂದ ಸಿನಿಮಾ ಸೂಪರ್ ಡೂಪರ್ ಹಿಟ್ ಆದಂತಹ ಸಿನಿಮಾ ನೋಡಿದ್ದೇ ಇಲ್ಲ.ಅದಾದ ಬಳಿಕ ಬ್ಯಾಂಗಲೋರ್ ಡೇಸ್ ಎಂಬ ಸಿನಿಮಾ ಬಂತು ಅದು ಕೂಡ ಸೂಪರ್ ಹಿಟ್ ಆದಂತಹ ಸಿನಿಮಾ.ಕಲೆಕ್ಷನ್ ವಿಚಾರದಲ್ಲೂ ಕೂಡ ದೊಡ್ಡ ಮಟ್ಟಿಗೆ ಸದ್ದು ಮಾಡಂತ ಸಿನಿಮಾ ಅದಾದ ನಂತರ ಅವರು ಮಾಡಿದಂತಹ ಸಿನಿಮಾಗಳು ಒಂದರ ಹಿಂದೆ ಹಿಟ್ ಸಿನಿಮಾಗಳಾಗುತ್ತದೆ.

ಇಷ್ಟೆಲ್ಲಾ ಹಿಟ್ ಸಿನಿಮಾಗಳನ್ನ ಕೊಟ್ರು ಕೂಡ ಕೋಟ್ಯಾಂತರ ಆಸ್ತಿಯನ್ನು ಹೊಂದಿದರು ಕೂಡ ಇವತ್ತು ಈ ನಟನಿಗೆ ನೆಮ್ಮದಿ ಇಲ್ಲ. ಮಾನಸಿಕವಾಗಿ ಯಾರೊಂದಿಗೂ ಹೇಳಲಾರದಂತಹ ನೋವನ್ನು ಅನುಭವಿಸುತ್ತಿದ್ದಾರೆ ಅಂದ್ರೆ ನಂಬುವುದು ಸ್ವಲ್ಪ ಕಷ್ಟ ಆಗುತ್ತೆ.ರಾತ್ರೋರಾತ್ರಿ ಒಂದು ವಿಡಿಯೋವನ್ನು ಮಾಡಿ ಅದರಲ್ಲಿ ಕಣ್ಣೀರನ್ನು ಹಾಕಿ ತಮ್ಮ ಅಭಿಮಾನಿಗಳ ಮುಂದೆ ತಮ್ಮ ನೋವಿನ ವಿಚಾರವನ್ನು ಅವರು ಹಂಚಿಕೊಂಡು ಕೆಲಸ ಸಮಯ ಕಳೆದ ನಂತರ ಮನಸ್ಸಿಗೆ ಏನ್ ಅನ್ನಿಸಿತ್ತೋ ಏನೋ ಆ ವಿಡಿಯೋನ ಅವರು ಡಿಲೀಟ್ ಮಾಡಿದ್ರು.ಅವರಿಗೆ ಈ ಸಮಯದಲ್ಲಿ ಯಾವ ರೀತಿ ಕಷ್ಟ ಆಗ್ತಾ ಇದೆ ಅಂತ ಯಾಕೆ ಅವರು ಈ ವಿಡಿಯೋನ ಮಾಡಿದ್ದರು ಯಾವ ಕಾರಣಕ್ಕೆ ಆ ವಿಡಿಯೋನ ಮತ್ತೆ ಡಿಲೀಟ್ ಮಾಡಿದ್ರು ಅಂತ ಈ ಕೆಳಗಿನ ವಿಡಿಯೋದಲ್ಲಿ ತಿಳಿಸಿಕೊಟ್ಟಿದ್ದೇವೆ ನೋಡಿ.

By god