ಹೊಟ್ಟೆಯ ಬೊಜ್ಜು ಕರಗಿಸಲು ಈ 3 ಸೂತ್ರಗಳನ್ನು ಪಾಲಿಸಿದರೆ ಸಾಕು.ಹೆಚ್ಚು ಕಷ್ಟ ಪಡಬೇಕಾಗಿಲ್ಲ..ಈ‌ ವಿಡಿಯೋ ನೋಡಿ
ಇತ್ತೀಚಿನ ಆಹಾರ ಪದ್ಧತಿಗಳು ಮನುಷ್ಯನ ದೇಹದ ಮೇಲೆ ಬಹಳಷ್ಟು ಪರಿಣಾಮ ಬೀರುತ್ತಿದೆ ಅದರಲ್ಲೂ ಅತಿಯಾದ ಬೊಜ್ಜು ಕೊಲೆಸ್ಟ್ರಾಲ್ ಆತನ ದೇಹದ ಆಕಾರವನ್ನೇ ಬದಲಾವಣೆ ಮಾಡುತ್ತಿದೆ ಮಾಡಿದರು ಆಹಾರದ ಮಿತಿಯಿಲ್ಲದೆ ಅಥವಾ ನಮ್ಮ ದಿನ ನಿತ್ಯದ ಚಟುವಟಿಕೆಯಲ್ಲಿ ಕ್ರಮಬದ್ಧವಾಗಿ ಇಲ್ಲದೆ ಇರುವ ಕಾರಣ ದೇಹದಲ್ಲಿ ಬೊಜ್ಜು ಅತಿ ಹೆಚ್ಚಾಗಿ ಕಾಣಿಸುತ್ತದೆ ಹೀಗಿರುವಾಗ ನಾವು ನಿಮಗೆ ಮೂರು ಸಲಹೆಗಳನ್ನು ನೀಡುತ್ತೇವೆ. ಈ ರೀತಿಯಾಗಿ ಮಾಡಿದರೆ ನಿಮ್ಮ ದೇಹದಲ್ಲಿನ ಬೊಜ್ಜು ಸರಳವಾಗಿ ಕಡಿಮೆಯಾಗುತ್ತಾ ಬರುತ್ತದೆ ದೇಹದ ಆಕಾರವು ಸುಂದರವಾಗಿರುತ್ತದೆ ಹಾಗಾದರೆ ಇದರ ಬಗ್ಗೆ ತಿಳಿಸುತ್ತೇವೆ.

WhatsApp Group Join Now
Telegram Group Join Now

ಪ್ರತಿಯೊಬ್ಬರೂ ದೇಹ ದಪ್ಪವಾಗಲು ಹಲವಾರು ಕಾರಣಗಳಿರುತ್ತವೆ ಅತಿಯಾದ ಆಹಾರ ಸೇವನೆ ಅಥವಾ ನಿದ್ರೆ ಸರಿಯಾದ ಸಮಯಕ್ಕೆ ಆಗದಿರುವುದು ಅತಿಯಾದ ಒತ್ತಡ ಸರಿಯಾದ ವ್ಯಾಯಾಮ ಮಾಡದೆ ಇರುವುದು ಊಟದ ಸಮಯವನ್ನು ಮುಂದೂಡುವುದು ಕುರುಕಳು ತಿಂಡಿಗಳು ಸದಾ ಜೆಬಿ ನಲ್ಲಿರುವುದು ಈ ಎಲ್ಲಾ ಸಮಸ್ಯೆಗಳಿಂದ ಮನುಷ್ಯನ ದೇಹ ಆಕಾರವನ್ನು ಕಳೆದುಕೊಂಡು ತೂಕ ಹೆಚ್ಚಾಗುತ್ತದೆ ಯಾವುದೇ ರೀತಿಯಾದ ಅತಿ ವೇಗ ತೂಕ ಕಡಿಮೆಯ ಪದ್ಧತಿಯನ್ನು ಅನುಸರಿಸಬಾರದು.

ಆದರೆ ಇಂದು ನಾವು ನಿಮಗೆ ತಿಳಿಸುವ ಮೂರು ಸೂತ್ರಗಳನ್ನು ಪಾಲಿಸಿದರೆ ಖಂಡಿತವಾಗಿಯೂ ನಿಮ್ಮ ದೇಹದ ತೂಕವನ್ನು ಕಳೆದುಕೊಳ್ಳಬಹುದು ಸಾಮಾನ್ಯವಾಗಿ ಈಗಿನ ಸಮಾಜದಲ್ಲಿ 35 ವರ್ಷದ ವ್ಯಕ್ತಿ 125 ಕೆಜಿ ಇರುವುದು ಸಹಜವಾಗಿ ಹೋಗಿದೆ ಕಾರಣ ಅವರು ತಿನ್ನುವಂತಹ ಬ್ರೆಡ್ ಬನ್ ರಸ್ಕ್ ಬಿಸ್ಕೆಟ್ ಚಾಕ್ಲೇಟ್ ಕೇಕ್ ಹಲವಾರು ರೀತಿಯ ತಿನಿಸುಗಳು ಪಿಜ್ಜಾ ಕೆಎಫ್ಸಿ ಈ ಎಲ್ಲದಕ್ಕೂ ಕೆಲವೊಂದು ಕೆಮಿಕಲ್ ಯಾವುದೇ ರೀತಿ ನಮ್ಮ ದೇಹದಲ್ಲಿ ಡೈಜೆಶನ್ ಆಗದೆ ಇರುವಂತಹ ಆಹಾರವಾಗಿರುತ್ತದೆ ಸರಿಯಾದ ಪ್ರಮಾಣದಲ್ಲಿ ನೀರು ಸೇವಿಸದೆ ಇರುವುದು ಹೀಗೆ ಅತಿಯಾಗಿ ದಪ್ಪ ಇರುವವರು ಸಹ ಯಾವುದೇ ರೀತಿಯ ವ್ಯಾಯಾಮ ವಾಕಿಂಗ್ ಮಾಡಲು ಸಾಧ್ಯವಾಗುವುದಿಲ್ಲ ಕಾರಣ ಅವರ ಮೂಳೆ ಮೇಲೆ ಅತಿಯಾದ ಒತ್ತಡ ಬಿದ್ದು ಅವುಗಳು ಕ್ರ್ಯಾಕ್ ಆಗುವ ಸಾಧ್ಯತೆ ಹೆಚ್ಚಾಗಿರುತ್ತದೆ.

ನಮ್ಮ ದೇಹದ ತೂಕವನ್ನ ಕಳೆದುಕೊಳ್ಳುವುದಕ್ಕಾಗಿ ಮೊದಲನೆಯದಾಗಿ ನಮಗೆ ಇರಬೇಕಾದ ಮುಖ್ಯವಾದದ್ದು ಎಂದರೆ ಅದು ಶಿಸ್ತು ನಮ್ಮ ಆಹಾರ ಪದ್ಧತಿಯಲ್ಲಿ ನಾವು ಶಿಸ್ತಿನಿಂದ ಇರಬೇಕು ಬಾಯಿ ಚಪಲಕ್ಕೆ ಇಷ್ಟ ಬಂದಿದ್ದಲ್ಲ ತಿನ್ನುತ್ತಿದ್ದರೆ ದೇಹದ ಆಕಾರವನ್ನ ಕಳೆದುಕೊಳ್ಳಬೇಕಾಗುತ್ತದೆ ಇದರಿಂದ ನಮ್ಮ ದೇಹದಲ್ಲಿ ರಕ್ತ ಕೂಡ ಶುದ್ಧವಾಗಿ ಇರುವುದಿಲ್ಲ ಎರಡನೆಯದಾಗಿ ನಮ್ಮ ಸುತ್ತಮುತ್ತ ಇರುವ ಆಹಾರ ಹಸಿರು ಆಹಾರವನ್ನು ಸೇವಿಸಬೇಕು ಪ್ರತಿದಿನ ತರಕಾರಿ ಹಣ್ಣು ಈ ರೀತಿಯಾಗಿ ನಮ್ಮ ಊಟದಲ್ಲಿ ಸೇರ್ಪಡೆಯಾಗಿರಬೇಕು ಹೀಗಿರುವಾಗ ಆದಷ್ಟು ಬೇಗ ನಮ್ಮ ತೂಕವನ್ನು ಕಳೆದುಕೊಂಡು ನೈಜ ರೀತಿಯಲ್ಲಿ ಜೀವನವನ್ನು ನಡೆಸಬಹುದು ನಮ್ಮ ಜೀವನದಲ್ಲಿ ಶಿಸ್ತು ಬದ್ಧತೆ ಇದ್ದರಷ್ಟೇ ನಮ್ಮ ಜೀವನವನ್ನು ಸುಖಕರವಾಗಿ ಆರೋಗ್ಯಕರವಾಗಿ ನೋಡಿಕೊಳ್ಳಲು ಸಾಧ್ಯವಾಗುತ್ತದೆ.

ಪ್ರತಿದಿನ ದಿನಕ್ಕೆ ಮೂರರಿಂದ ಐದು ಲೀಟರ್ ನೀರನ್ನು ಸೇವಿಸಬೇಕು ನಮ್ಮ ಕೈಲಿ ಸಾಧ್ಯವಾದಷ್ಟು ನಡೆಯಬೇಕು ಅತಿ ವೇಗವಾಗಿ ಅಲ್ಲ ಸರಳವಾಗಿ ಆದರೂ ಸಹ ನಡೆಯಬೇಕು ನಮ್ಮ ಊಟದಲ್ಲಿ ಇತಿಮಿತಿ ಇರಬೇಕು ಊಟದ ಜೊತೆ ಹಸಿರು ತರಕಾರಿ ಹೆಚ್ಚಾಗಿ ಇರಬೇಕು ಚಹ ಕಾಫಿ ಇವುಗಳನ್ನು ಕಡಿಮೆ ಮಾಡಬೇಕು ಇದಕ್ಕೆ ಬಹಳ ಆಡಿಟ್ ಆಗಿದ್ದರೆ ದಿನಕ್ಕೆ ಒಂದು ಬಾರಿ ಸೇವಿಸಿದರೆ ಒಳ್ಳೆಯದು ಅದರ ಬದಲಾಗಿ ಕಪ್ಪು ಟಿ ಅಂದರೆ ಬ್ಲಾಕ್ ಟೀ ಅನ್ನ ಸೇವಿಸಿದರೆ ಬಹಳ ಒಳ್ಳೆಯದು ಅದರಲ್ಲಿ ಶುಂಠಿ ಏಲಕ್ಕಿ ಚಕ್ಕೆ ಲವಂಗ ಈ ರೀತಿಯ ನಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಶುದ್ಧಗೊಳಿಸುವಂತಹ ಆಹಾರ ಪದ್ಧತಿ ಅದರಲ್ಲಿ ಇರುತ್ತದೆ ಅದರಿಂದ ನಮ್ಮ ದೇಹದಲ್ಲಿನ ಕೊಲೆಸ್ಟ್ರಾಲ್ ಕೂಡ ಕಡಿಮೆಯಾಗುತ್ತದೆ ಇದರಿಂದ ದೇಹದ ತೂಕ ಕಡಿಮೆಯಾಗುತ್ತದೆ ನಮ್ಮ ಊಟದಲ್ಲಿ ಫೈಬರ್ ಅಂಶ ಅತಿ ಹೆಚ್ಚಾಗಿ ಇರುವ ಆಹಾರವನ್ನ ಪ್ರತಿನಿತ್ಯ ಸೇವಿಸಬೇಕು ಚಪಾತಿ, ಮುದ್ದೆ, ಈ ಎಲ್ಲವೂ ನಮ್ಮ ದೇಹವನ್ನ ಶುದ್ಧವಾಗಿ ಇಟ್ಟುಕೊಳ್ಳಲು ಉಪಯುಕ್ತವಾಗಿರುತ್ತದೆ ಹೀಗಾಗಿ ನಮ್ಮ ಜೀವನದಲ್ಲಿ ಶ್ರದ್ಧೆ ಇದ್ದರೆ ನಾವು ಏನನ್ನು ಬೇಕಾದರೂ ಜಯಿಸಬಹುದು ಮತ್ತಷ್ಟು ಮಾಹಿತಿಯನ್ನು ತಿಳಿಸಿ ಕೊಡುತ್ತೇವೆ ನಮ್ಮ ಮೇಲೆ ಸದಾ ನಮಗೆ ನಂಬಿಕೆ ಇರಬೇಕು ಧನ್ಯವಾದಗಳು.

By god