ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದ ಯುಟುಬರ್ ಇಂದು ಎಂಎಲ್ಎ ಅಭ್ಯರ್ಥಿ..ಈ ಒಬ್ಬ ಹುಡುಗ ಯಾರಿರಬಹುದು ಎಂದು ಪ್ರತಿಯೊಬ್ಬರಿಗೂ ತಿಳಿದಿದೆ ಏಕೆಂದರೆ ಸಾಮಾಜಿಕ ಜಾಲತಾಣವಾದ ಯೂಟ್ಯೂಬ್ ಎಂಬ ಒಂದು ಆಪ್ ಅಲ್ಲಿ ಈತನು ಹಲವಾರು ವಿಡಿಯೋಗಳನ್ನು ಹಾಕಿದ್ದಾನೆ ಅದು ತುಂಬಾ ಚರ್ಚೆಗೆ ಕೂಡ ಕಾರಣವಾಗಿದೆ ಸಾಮಾನ್ಯವಾಗಿ ಇಂದಿನವರು.
ಪ್ರತಿಯೊಬ್ಬರು ಹೇಳುತ್ತಿರುವ ಮಾತು ಒಂದೇ ಒಂದು ಅದು ಏನೆಂದರೆ ಇಂದಿನ ಯುವ ಜನಾಂಗದವರು ರಾಜಕೀಯಕ್ಕೆ ಬರಬೇಕು ಅವರು ಬಂದರೆ ಈಗಿನ ವ್ಯವಸ್ಥೆ ಸ್ವಲ್ಪವಾದರೂ ಸರಿ ಹೋಗುತ್ತದೆ ಎಂದು ಆದರೆ ನಮ್ಮ ಜನರು ಕೇವಲ ಅದನ್ನು ಮಾತಿನಲ್ಲಿ ಮಾತನಾಡುತ್ತಲೇ ಇರುತ್ತಾರೆ ರಾಜಕೀಯ ಎಂದರೆ ಹಾಗೆ ಅದು ದೊಡ್ಡ ಸಮುದ್ರ ಅದರಲ್ಲಿ ಮುಳುಗಬೇಕು ಎಂದರೆ.
ಎಲ್ಲವನ್ನು ಬಿಟ್ಟು ಬರಬೇಕು ಮತ್ತು ತುಂಬಾ ಹಣ ಇರಬೇಕು ತುಂಬಾ ವರ್ಷ ಕೆಲಸವನ್ನು ಮಾಡಿರಬೇಕು ಆ ಒಂದು ಪಕ್ಷಗಳಿಗೆ ಎಂದು ಆದರೆ ಈ ಯುವಕ ಸರಿಸುಮಾರು 26 ಅಥವಾ 27 ವರ್ಷದ ಯುವಕ ಈ ವಯಸ್ಸಿಗೆ ನಾನು ಏನನ್ನಾದರೂ ಸಾಧನೆ ಮಾಡಲೇಬೇಕು ಎಂದು ಮುಂದೆ ಬಂದು ರಾಜಕೀಯಕ್ಕೆ ಇಳಿದಿದ್ದಾರೆ ಮತ್ತು ಅವರದೇ ರೀತಿಯಲ್ಲಿ ಭಾಷಣಗಳನ್ನು.
ಮಾಡಿ ಜನರು ಅವರೊಂದಿಗೆ ಬೆರೆಯಲು ಶುರುವಾಗಿದ್ದಾರೆ ಈ ವ್ಯಕ್ತಿ ಯಾವ ರಾಜಕೀಯ ಕುಟುಂಬದವರಿಗೂ ಸೇರಿಲ್ಲ ಮತ್ತು ಯಾವ ದೊಡ್ಡ ಸೆಲೆಬ್ರಿಟಿ ಕುಟುಂಬದವರು ಅಲ್ಲ ಅಥವಾ ತುಂಬಾ ಶ್ರೀಮಂತ ವ್ಯಕ್ತಿಯು ಅಲ್ಲ ಸಾಮಾನ್ಯವಾಗಿ ಮಧ್ಯಮ ವರ್ಗದ ಕುಟುಂಬದಿಂದ ಬಂದ ಈ ವ್ಯಕ್ತಿ ಯೂಟ್ಯೂಬಲ್ಲಿ ಹಲವಾರು ಸಾಮಾಜಿಕ ಕಳಕಳಿಯುಳ್ಳ ವಿಷಯಗಳನ್ನು ಜನರಿಗೆ.
ಹೇಳುತ್ತಲೇ ಬರುತ್ತಿದ್ದಾರೆ ಅವರ ಒಂದು ಯೂಟ್ಯೂಬ್ ಚಾನೆಲ್ನಲ್ಲಿ ಈ ಒಬ್ಬ ಯುವಕನ ಮಾಹಿತಿ ಈಗಿನ ಯುವ ಜನಾಂಗದ ಹುಡುಗರಿಗೆ ಒಂದು ಮಾದರಿಯಾಗುತ್ತದೆ ಎಂದು ಇವರ ಬಗ್ಗೆ ಕೆಲವು ವಿಷಯಗಳನ್ನು ಹಂಚಿಕೊಳ್ಳುತ್ತೇವೆ ಅದು ಏನೆಂದರೆ, ಮೊದಲಿಗೆ ಈ ವಯಸ್ಸಿನಲ್ಲಿ ಇವರು ಆಯ್ಕೆ ಮಾಡಿಕೊಂಡಿರುವ ದಾರಿಯೇ ತುಂಬಾ ದೊಡ್ಡದು ಇದರಲ್ಲಿ.
ಅವರು ಗೆಲುವನ್ನು ಕಾಣುತ್ತಾರೋ ಅಥವಾ ಸೋಲನ್ನು ಕಾಣುತ್ತಾರೋ ಅದು ಎರಡನೆಯ ಮಾತು ಆದರೆ ಈ ಒಂದು ಪ್ರಯತ್ನಕ್ಕೆ ಅವರು ಧುಮುಕಿದ್ದಾರೆ ನಾನು ಏನಾದರೂ ಮಾಡೇ ಮಾಡುತ್ತೇನೆ ಎಂದು ನಂಬಿ ಅವರು ಈ ಒಂದು ಸಮುದ್ರದ ಹಾಳಕ್ಕೆ ಇಳಿಯುತ್ತಿದ್ದಾರೆ ಅದಕ್ಕೆ ಜನರ ಬೆಂಬಲ ಸಿಕ್ಕರೆ ಅವರು ಗೆದ್ದು ಅವರ ಕೈಯಲ್ಲಿ ಆಗುವ ಕೆಲಸಗಳನ್ನು ಮಾಡುತ್ತೇನೆ.
ಎಂದು ಆಶ್ವಾಸನೆಯನ್ನು ಕೊಟ್ಟಿದ್ದಾರೆ ಈ ಹುಡುಗನ ಹೆಸರು ಚಂದನ್ ಗೌಡ ಎಂದು ತುಂಬಾ ಶ್ರೀಮಂತ ಕುಟುಂಬದ ಮಗ ಏನು ಅಲ್ಲ ಇವರ ತಂದೆ ಎಳನೀರನ್ನು ಮಾರುಕಟ್ಟೆಗೆ ತೆಗೆದುಕೊಂಡು ಹೋಗಿ ಹಾಕುವ ಕೆಲಸವನ್ನು ಮಾಡುತ್ತಿದ್ದರು ಹುಟ್ಟಿದ್ದು ಕೆ ಆರ್ ಪೇಟೆಯ ಹೂಚನಹಳ್ಳಿ ಯಲ್ಲಿ ಇವರು ಹಂತ ಹಂತವಾಗಿ ವಿದ್ಯಾಭ್ಯಾಸವನ್ನು ಮುಗಿಸಿ ಬೆಂಗಳೂರಿಗೆ ಕೆಲಸಕ್ಕೆ.
ಬರುತ್ತಾರೆ ಆಗ ಇವರು ಹಲವಾರು ಹೋಟೆಲ್ಗಳಲ್ಲಿ ಮತ್ತು ಬೇಕರಿಗಳಲ್ಲಿ ಕೆಲಸವನ್ನು ಮಾಡಿರುತ್ತಾರೆ ಮತ್ತು ಅಂಗಡಿಗಳಲ್ಲೂ ಕೂಡ ಇವರು ಕೆಲಸವನ್ನು ಮಾಡಿರುತ್ತಾರೆ ಹಾಗಾಗಿ ಅವರಿಗೆ ಸ್ವಲ್ಪ ಬೆಂಗಳೂರಿನ ವಾತಾವರಣ ಇದ್ದೇ ಇರುತ್ತದೆ ನಂತರ ಕಸ್ತೂರಿ ಸುದ್ದಿವಾಹಿನಿಯಲ್ಲಿ ಸ್ವಲ್ಪ ವರ್ಷ ಕೆಲಸವನ್ನು ಮಾಡುತ್ತಾರೆ ನಂತರ ಈ ಒಂದು ಕೆಲಸ ನನಗಲ್ಲ ಎಂದು ಯೋಚಿಸಿ ಅದರಿಂದ.
ಹೊರ ಬರುತ್ತಾರೆ ಅದಾದ ನಂತರ ಕೆಲವು ಯೌಟ್ಯೂಬ್ ಚಾನೆಲ್ ಗಳಲ್ಲಿ ಕೆಲಸವನ್ನು ಮಾಡುತ್ತಾರೆ ನಂತರ ನಾನು ಏನಾದರೂ ಮಾಡಬೇಕು ಎಂದು ಅವರದೇ ರೀತಿಯ ಒಂದು ಯೂಟ್ಯೂಬ್ ಚಾನಲ್ ಅನ್ನು ಶುರು ಮಾಡುತ್ತಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.